ಈ ಮುದ್ರೆಯು ಅಪಾನ ಮುದ್ರೆ ಮತ್ತು ವಾಯು ಮುದ್ರೆಗಳ ಮಿಶ್ರಣವಾಗಿದೆ.
ಮಾಡುವ ವಿಧಾನ :
ತೋರು ಬೆರಳಿನ ಮೇಲೆ ಹೆಬ್ಬೆರಳನ್ನು ಇಡಬೇಕು ಹಾಗೂ ಮೃದುವಾಗಿ ಒತ್ತಬೇಕು. ನಂತರ ಮಧ್ಯದ ಬೆರಳು ಹಾಗೂ ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಗಿಸಬೇಕು.
ನೀವು ಇದನ್ನು ಊಟ ಮಾಡಿದ ನಂತರ ಅಭ್ಯಾಸ ಮಾಡುವುತ್ತಿದ್ದರೆ, 1 ಗಂಟೆ ಅಂತರವನ್ನು ಬಿಡಿ.
ನೀವು ನಡೆಯುವಾಗ ಅಥವಾ ಮಲಗುವಾಗ ಅಥವಾ ಕುರ್ಚಿಯ ಮೇಲೆ ಕುಳಿತಾಗ ಈ ಮುದ್ರೆ ಅಭ್ಯಾಸ ಮಾಡಬಹುದು.
ಉತ್ತಮ ಪ್ರಯೋಜನಗಳಿಗಾಗಿ, ಇದನ್ನು ಕನಿಷ್ಠ 2-3 ತಿಂಗಳುಗಳವರೆಗೆ ಅಭ್ಯಾಸ ಮಾಡಬೇಕು.
ಪ್ರಯೋಜನಗಳು :
- ಹೃದಯಾಘಾತದ ಸಮಯದಲ್ಲಿ ಈ ಮುದ್ರೆಯನ್ನು ಮಾಡಿದರೆ ಕೂಡಲೇ ಪ್ರಯೋಜನ ದೊರೆಯುತ್ತದೆ.
- ಅಧಿಕ ರಕ್ತದೊತ್ತಡ ಸಮಸ್ಯೆಯೂ ಇಲ್ಲವಾಗುತ್ತದೆ.
- ಗ್ಯಾಸ್ಟ್ರಿಕ್ ಸಮಸ್ಯೆ, ಮೂಲವ್ಯಾಧಿ, ಅರೆ ತಲೆನೋವಿನಿಂದ ಮುಕ್ತಿ ಪಡೆಯಬಹುದು.
- ಕೆಲಸದ ಒತ್ತಡದ ವೇಳೆಯಲ್ಲಿ ಅಥವಾ ಮೆಟ್ಟಿಲುಗಳನ್ನು ಏರುವಾಗ ಬೆಟ್ಟ ಗುಡ್ಡ ಹತ್ತುವ ಸಂದರ್ಭದಲ್ಲಿ ಹೃದಯ ಮುದ್ರಿ ಮಾಡಿ, ಒಂದೆರಡು ನಿಮಿಷ ನಿಂತುಕೊಂಡು ಮತ್ತೆ ಹತ್ತಬೇಕು. ಆಗ ಆಯಾಸ ಪರಿಹಾರವಾಗಿ ದೇಹದಲ್ಲಿ ಚೈತನ್ಯ ಮೂಡುತ್ತದೆ.
ಸಮಯ ಮತ್ತು ಅವಧಿ :
- ಈ ಮುದ್ರೆಯನ್ನು 30-45 ನಿಮಿಷಗಳ ಕಾಲ ಮಾಡಬಹುದು.
- ಇದನ್ನು ದಿನಕ್ಕೆ ಮೂರು ಬಾರಿ 12-15 ನಿಮಿಷಗಳ ಕಾಲ ಹೆಚ್ಚಿಸಬಹುದು
- ಮುಂಜಾನೆ ಅಭ್ಯಾಸ ಮಾಡಲು ಉತ್ತಮ ಸಮಯ.
- ಮುದ್ರೆ ನಂತರ ನಿಮ್ಮ ಬೆರಳುಗಳನ್ನು ನಿಧಾನವಾಗಿ ಅನ್ಲಾಕ್ ಮಾಡಿ
- ಸುಲಭವಾಗಿ ಉಸಿರಾಡಿ ಮತ್ತು ವಿಶ್ರಾಂತಿ ಪಡೆಯಿರಿ.
ಚಕ್ರಗಳ ಮೇಲೆ ಪರಿಣಾಮ:
- ಹೃದಯ ಚಕ್ರವನ್ನು ಸಮತೋಲನಗೊಳಿಸುತ್ತದೆ, ಶಕ್ತಿಯನ್ನು ನೀಡುತ್ತದೆ ಮತ್ತು ಬಲಪಡಿಸುತ್ತದೆ.