ನೀವು ವಾಸ್ತುವನ್ನು ನಂಬುವಿರಾದರೆ, ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು ಎಂದಿದ್ದರೆ ಮನೆಯ ಮೆಟ್ಟಿಲುಗಳನ್ನು ನಿರ್ಮಿಸುವ ಮುನ್ನ ಕೆಲವು ವಿಚಾರಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ.
ನಗರದಲ್ಲಿ ಮನೆಗಳನ್ನು ಕಟ್ಟಲು ಹೆಚ್ಚು ಸ್ಥಳಾವಕಾಶ ಸಿಗುವುದಿಲ್ಲ. ಇಂಥ ಕಡೆಗಳಲ್ಲಿ ಡ್ಯೂಪ್ಲೆಕ್ಸ್ ಅಥವಾ ಮಹಡಿ ಮನೆಗಳನ್ನು ಕಟ್ಟುತ್ತಾರೆ. ಮೆಟ್ಟಿಲುಗಳ ಕೆಳಗಡೆ ಇರುವ ಜಾಗವನ್ನು ದಾಸ್ತಾನು ಕೊಠಡಿಯಾಗಿ, ಬಚ್ಚಲುಮನೆ, ಶೌಚಾಲಯವಾಗಿ ಅಥವಾ ಇನ್ನೂ ಯಾವ್ಯಾವುದೋ ಉದ್ದೇಶಗಳಿಗೆ ಬಳಸುವುದುಂಟು. ಆದರೆ, ಮೆಟ್ಟಿಲುಗಳ ಕೆಳಭಾಗದಲ್ಲಿ ಚಪ್ಪಲಿ ಸ್ಟ್ಯಾಂಡ್, ದಾಸ್ತಾನು ಕೊಠಡಿ, ಲಾಕರ್, ಕಸದ ಡಬ್ಬಿ ಇತ್ಯಾದಿಗಳನ್ನು ನಿರ್ಮಿಸಲೇಬಾರದು. ಮೆಟ್ಟಿಲುಗಳ ಕೆಳಭಾಗದಲ್ಲಿ ಅಡುಗೆ ಮನೆ ನಿರ್ಮಿಸಿದರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಮೆಟ್ಟಿಲುಗಳ ಪಕ್ಕದಲ್ಲಿರುವ ಕೊಠಡಿಯನ್ನು ಅತಿಥಿಗಳ ಕೋಣೆಯಂತೆ ಬಳಸಿ, ಲಿವಿಂಗ್ ರೂಮ್ ನಂತೆ ಬೇಡ ಎಂಬ ಸಲಹೆಯನ್ನು ವಾಸ್ತುಶಾಸ್ತ್ರಜ್ಞರು ನೀಡುತ್ತಾರೆ.