Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ಮನೆ ಟಿಪ್ಸ್

ಸ್ವಂತ ಮನೆ ಕಟ್ಟುತ್ತಿರುವ ಜನರ ಓಪನ್ ಕಿಚನ್ ಟ್ರೆಂಡ್ ಆಗುತ್ತಿದೆ


16 Sep 2020

ವಾಸ್ತು ವಿನ್ಯಾಸದಲ್ಲಿ ಹೊಸ ಪ್ರಯೋಗಗಳು ಆಗುತ್ತಲೇ ಇವೆ. ತಮ್ಮ ಮನೆಯಲ್ಲಿ ಏನಾದರೂ ಹೊಸತನವಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇವುಗಳ ಪೈಕಿ ಇತ್ತೀಚಿನ ವರ್ಷಗಳಲ್ಲಿ ಇಟಾಲಿಯನ್ ಮಾದರಿಯ ಓಪನ್ ಕಿಚನ್ ಗಳು ಸಾಕಷ್ಟು ಜನಪ್ರಿಯವಾಗಿವೆ.

ಈ ಹಿಂದೆ ಅಡುಗೆ ಮನೆಗೆ ಬಾಗಿಲು ಇರುತ್ತಿತ್ತು. ಅಥವಾ ಅದನ್ನು ಮರೆ ಮಾಡಲು ಒಂದು ಕರ್ಟನ್ ಆದರೂ ಬಳಸುತ್ತಿದ್ದರು. ಪಾಶ್ಚಿಮಾತ್ಯ ಶೈಲಿಯಲ್ಲಿ ಓಪನ್ ಕಿಚನ್ ಪರಿಕಲ್ಪನೆ ಭಾರತದಲ್ಲಿ ಪರಿಚಯವಾದಾಗ ಮೂಗು ಮುರಿದವರೇ ಹೆಚ್ಚು. ಅಯ್ಯೋ. ಎಲ್ಲರಿಗೂ ಕಾಣುವಂತೆ ಅಡುಗೆ ಮನೆಯಲ್ಲಿರುವುದೇ? ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಅದು ಒಪ್ಪವಾಗಿರುವುದಿಲ್ಲ. ಪಾತ್ರೆಗಳು, ಡಬ್ಬಗಳು, ತರಕಾರಿ, ಸಾಮಾನುಗಳ ಜತೆಗೆ ಒಂದಿಷ್ಟೂ ಕಸವೂ ಇರುತ್ತದೆ. ಅತಿಥಿಗಳು ಇದನ್ನೆಲ್ಲ ಗಮನಿಸಿದರೆ ಮುಜುಗರವಾಗುವುದಿಲ್ಲವೇ ಎಂದು ಸಂಕೋಚಪಟ್ಟವರೇ ಬಳಿಕ ಆ ಶಿಸ್ತಿಗೆ ಒಗ್ಗಿಕೊಂಡಿದ್ದು ವಿಶೇಷ.

ಅಡುಗೆ ಮನೆ ಪಾಕ ತಯಾರಿಗೆ ಮಾತ್ರವಲ್ಲ, ಅದು ಸಾಮಗ್ರಿಗಳ ದಾಸ್ತಾನು ಕೋಣೆಯೂ ಆಗಿರುತ್ತಿತ್ತು. ಅದಕ್ಕೆ ಬಾಗಿಲು ಅಳವಡಿಸುತ್ತಿದ್ದ ಕಾರಣ ಅಡುಗೆ ಕೋಣೆಯ ಅಲಂಕಾರಕ್ಕೆ ಯಾರೂ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ. ತೀರಾ ಆಪ್ತರಲ್ಲದ ಅತಿಥಿಗಳು ಎಂದೂ ಅಡುಗೆ ಮನೆಗೆ ಬರುವುದಿಲ್ಲ. ಆದರೆ, ಇತ್ತೀಚೆಗೆ ಮನೆಗೆ ಬಂದ ಅತಿಥಿಗಳಿಗೆ ನೇರವಾಗಿ ಕಾಣುವಂತೆ ಅಡುಗೆ ಮನೆಯನ್ನು ನಿರ್ಮಿಸಲಾಗುತ್ತಿದೆ. ಹಾಲ್ ನಿಂದಲೇ ಕಾಣಿಸುವಂತೆ ಅದಕ್ಕೆ ದೊಡ್ಡದೊಂಡು ಕಿಂಡಿಯನ್ನೂ ಬಿಟ್ಟಿರುತ್ತಾರೆ. ಗೃಹಿಣಿ ಅಥವಾ ಅಡುಗೆ ಕೆಲಸದವರು ಅಲ್ಲಿಂದಲೇ ಊಟ, ತಿಂಡಿ ಅಥವಾ ಪಾನೀಯಗಳನ್ನು ಸಿದ್ಧಪಡಿಸಿ ಅತಿಥಿಗಳಿಗೆ ನೀಡಬಹುದು.

ಮನೆ ಚಿಕ್ಕದಿರಲಿ, ದೊಡ್ಡದಿರಲಿ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಡುಗೆ ಕೋಣೆ ಕಾಣಿಸುವಂತಿರಬೇಕು. ಹೀಗಾಗಿ, ಈಗ ಅಡುಗೆ ಮನೆಯ ಒಪ್ಪ-ಓರಣಕ್ಕೂ ಆದ್ಯತೆ ನೀಡುತ್ತಿದ್ದಾರೆ. ಧಾನ್ಯಗಳು, ಮಸಾಲೆ ಪದಾರ್ಥಗಳು ಹಾಗೂ ಪಾತ್ರೆಗಳನ್ನಿಡಲು ಪ್ರತ್ಯೇಕ ಡ್ರಾ ಹಾಗೂ ಕಪಾಟುಗಳನ್ನು ಮಾಡಿಸಿರುತ್ತಾರೆ. ಹೊಗೆ ನಿವಾರಿಸುವ ಚಿಮ್ನಿ, ಶುದ್ಧ ನೀರಿನ ದುಬಾರಿ ಯಂತ್ರವೂ ಅತಿಥಿಗಳಿಗೆ ಕಾಣುವಂತಿರುತ್ತದೆ.

ಗ್ಯಾಸ್ ಒಲೆ ಕೂಡ ಸಜ್ಜೆಯೊಳಗೆ ಮರೆಯಾಗಿರುವ ರೀತಿಯಲ್ಲೇ ಅಳವಡಿಸಿರುತ್ತಾರೆ. ಗ್ಯಾಸ್ ಸಿಲಿಂಡರ್ ಗಂತೂ ಮೊದಲೇ ಮನೆಯ ಹೊರಗಡೆ ವ್ಯವಸ್ಥೆ ಮಾಡಿರುತ್ತಾರೆ. ಇದರ ಜತೆಗೆ ಅಡುಗೆ ಕೋಣೆಯಲ್ಲಿ ಸಾಕಷ್ಟು ಗಾಳಿ-ಬೆಳಕು ಆಡುವಂತೆ ದೊಡ್ಡ ಗಾತ್ರದ ಕಿಟಕಿಗಳು, ಎಕ್ಸಾಸ್ಟ್ ಫ್ಯಾನ್ ಇತ್ಯಾದಿಗಳನ್ನು ಬಳಸುವುದುಂಟು. ಹೀಗಾಗಿ, ಈಗ ಮಾರುಕಟ್ಟೆಯಲ್ಲೂ ಅಡುಗೆ ಮನೆಗಳ ವಿನ್ಯಾಸಕ್ಕೆ, ಅಲಂಕಾರಕ್ಕೆ ಸಾಕಷ್ಟು ಸಲಕರಣೆಗಳು ಸಿಗುತ್ತಿವೆ.

ಸ್ವಚ್ಛತೆಗೆ ಆದ್ಯತೆ ನೀಡುವವರು ಹಾಗೂ ತಮ್ಮ ಮನೆಯಲ್ಲಿ ಅತಿಥಿಗಳು ಯಾವುದೇ ಅಂಜಿಕೆಯಿಲ್ಲದೆ ಆಹಾರ ಸ್ವೀಕರಿಸುವಂತೆ ಮಾಡುವುದಕ್ಕಾಗಿ ಓಪನ್ ಕಿಚನ್ ಅಳವಡಿಕೆ ಹೆಚ್ಚಿದೆ.

ಈಗಿನ ಅಡುಗೆ ಮನೆಗಳು ಎಣ್ಣೆ ಜಿಡ್ಡು, ಧೂಳು ಹಾಗೂ ಹೊಗೆಯಿಂದ ಕಪ್ಪಾಗಿರುವುದಿಲ್ಲ. ಪಾತ್ರೆಗಳು, ಗ್ಯಾಸ್ ಕಟ್ಟೆ ಇತ್ಯಾದಿ ಗಲೀಜಾಗಿರುವುದಿಲ್ಲ. ಅತಿಥಿಗಳಿಗೆ ಕಾಣಿಸುತ್ತದೆ ಎನ್ನುವ ಕಾರಣಕ್ಕಾಗಿಯಾದರೂ ಅದನ್ನು ಆಗಾಗ ಸ್ವಚ್ಛಗೊಳಿಸುತ್ತಾರೆ. ಓಪನ್ ಕಿಚನ್ ನಲ್ಲಿ ಸಾಕಷ್ಟು ಗಾಳಿ-ಬೆಳಕು ಇರುವುದರಿಂದ ಕೆಲಸ ಮಾಡುವಾಗ ಉಸಿರುಗಟ್ಟುವುದಿಲ್ಲ. ಅತಿಥಿಗಳೊಂದಿಗೆ ಮಾತನಾಡುತ್ತಲೇ ಅವರಿಗೆ ಚಹಾ, ತಿಂಡಿ ಅಥವಾ ಊಟ ತಯಾರಿಸಿಕೊಡಲು ಅವಕಾಶವಿರುತ್ತದೆ. ಮಕ್ಕಳ ಓದಿನತ್ತಲೂ ಗಮನ ಹರಿಸಬಹುದು. ಟೀವಿ ನೋಡುತ್ತಲೂ ಅಡುಗೆ ಮಾಡಬಹುದು. ಇಲ್ಲಿಂದ ಡೈನಿಂಗ್ ಹಾಲ್ ಗೆ ಆಹಾರ ಪದಾರ್ಥಗಳನ್ನು ಹಾಗೂ ತಟ್ಟೆ-ಲೋಟಗಳನ್ನು ಸುಲಭವಾಗಿ ಸಾಗಿಸಬಹುದು ಎನ್ನುವುದು ಬಹುತೇಕ ಗೃಹಿಣಿಯರ ಅನುಭವ.

ಇವುಗಳತ್ತ ಗಮನವಿರಲಿ
ತೆರೆದ ಅಡುಗೆಕೋಣೆ ನಿರ್ವಿುಸುವಾಗ ಅದರ ಅಂದ-ಚಂದಕ್ಕೇ ಹೆಚ್ಚಿನ ಮಹತ್ವ. ಗೋಡೆಗಳಲ್ಲಿ ಉತ್ತಮ ವಿನ್ಯಾಸ ಹಾಗೂ ಗುಣಮಟ್ಟದ ಕಪಾಟುಗಳನ್ನುಅಳವಡಿಸಿ, ಪಾತ್ರೆ, ಸಾಮಾನುಗಳ ಡಬ್ಬಗಳನ್ನು ಓರಣವಾಗಿ ಹೊಂದಿಸಬೇಕು. ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಸ್ಥಾನವಿದ್ದರೆ ಮಾತ್ರ ಅದು ಚೆನ್ನಾಗಿ ಕಾಣಿಸುವುದು. ಆಕರ್ಷಕ ವಿನ್ಯಾಸದ ಚಿಮ್ನಿ, ಕಡಿಮೆ ಸದ್ದು ಮಾಡುವ ಮಿಕ್ಸಿ, ಉತ್ತಮ ಗುಣಮಟ್ಟದ ಶುದ್ಧ ನೀರು ಯಂತ್ರ ಇವೆಲ್ಲ ಅಡುಗೆ ಮನೆಯ ಘನತೆಯನ್ನು ಹೆಚ್ಚಿಸುತ್ತವೆ. ಜತೆಗೆ, ಗೋಡೆ ಹಾಗೂ ನೆಲಕ್ಕೆ ಬಳಸುವ ಟೈಲ್ಸ್ ಬಗ್ಗೆಯೂ ಗಮನ ಹರಿಸಬೇಕು. ಅವುಗಳ ಬಣ್ಣ, ವಿನ್ಯಾಸವೂ ಇಡೀ ಅಡುಗೆ ಮನೆಯ ವಿನ್ಯಾಸಕ್ಕೆ ಒಪ್ಪುವಂತಿರಬೇಕು. ಕಾಫಿ ಕಪ್, ನೀರಿನ ಜಗ್, ತಟ್ಟೆ, ಲೋಟಗಳು, ಪಾತ್ರೆಗಳು – ಹೀಗೆ ಎಲ್ಲ ವಿಚಾರಗಳಲ್ಲೂ ಗಮನಹರಿಸಿ, ಸೂಕ್ತವಾದ ಆಯ್ಕೆಗಳನ್ನು ಮಾಡಿಕೊಂಡರೆ ಮಾತ್ರ ಓಪನ್ ಕಿಚನ್ ಮಾಡಿದ್ದಕ್ಕೆ ಸಾರ್ಥಕ.

Share on:

City Information

(Private)