Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಪ್ರಾಪರ್ಟಿ » ಮನೆ ಟಿಪ್ಸ್

ಚಳಿಗಾಲದಲ್ಲಿ ಮನೆ ಬೆಚ್ಚಗಿಡುವುದು ಹೇಗೆ ?


16 Sep 2020

ಬೆಚ್ಚನಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ಕವಿ ಸರ್ವಜ್ಞನೇ ಹೇಳಿದ್ದಾನೆ. ಮಳೆ, ಗಾಳಿ, ಬಿಸಿಲು ಹಾಗೂ ಚಳಿಯಿಂದ ನಮಗೆ ರಕ್ಷಣೆ ಒದಗಿಸುವ ಬೆಚ್ಚನೆಯ ಮನೆ ಎಂದರೇ ಒಂದು ಸುಖಾನುಭವ.

ಇನ್ನು ಚಳಿಗಾಲ ಬಂದೆಂದರೆ ರತ್ನಗಂಬಳಿ, ದಿಂಬು ಹಾಗೂ ಉಣ್ಣೆಯ ಹಲವು ಆರಾಯದಾಯಕ ಸಾಧನಗಳನ್ನು ಬಳಸಿ ಮನೆಯನ್ನು ಸಿಂಗರಿಸುವ ಜತೆಗೆ, ಚಳಿಗಾಲವನ್ನು ಸುಖದಿಂದ ಕಳೆಯುವ ಹವಣಿಕೆ ಪ್ರತಿಯೊಬ್ಬರಲ್ಲೂ ಇರುತ್ತದೆ.

ಕೆಲವು ಪ್ರದೇಶಗಳಲ್ಲಿ ವಿಪರೀತ ಚಳಿ ಇರುತ್ತದೆ. ಆಗ ಟೈಲ್ಸ್ ಹಾಕಿದ ನೆಲದ ಮೇಲೆ ಕಾಲಿಡಲೂ ಹಿಂಜರಿಕೆ. ಹಾಸಿಗೆ ಬಿಟ್ಟು ಮೇಲೇಳಲೂ ಬೇಸರಪಟ್ಟುಕೊಂಡು ಮತ್ತೆ ಮತ್ತೆ ಹೊದಿಕೆಯೊಳಗೆ ತೂರಿಕೊಳ್ಳುತ್ತೇವೆ. ಹಾಗಂತ ಎಷ್ಟು ಹೊತ್ತು ಮಲಗಿರಲು ಸಾಧ್ಯ? ಎದ್ದು ಚಟುವಟಿಕೆ ಆರಂಭಿಸಲೇ ಬೇಕಲ್ಲವೇ? ಒಂದಷ್ಟು ಉಪಕರಣಗಳು ಮನೆಯನ್ನು ಬೆಚ್ಚಗಿರಿಸಿ, ನಮ್ಮನ್ನು ಚಳಿಯಿಂದ ಕಾಪಾಡಲೆಂದೇ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಅವುಗಳನ್ನು ಒಂದೊಂದಾಗಿ ನೋಡೋಣ.

ರತ್ನಗಂಬಳಿ ಹಾಸು
ಮನೆಯ ವಿಶಾಲವಾದ ಹಾಲ್ ನಲ್ಲಿ ಬಣ್ಣ ಬಣ್ಣದ ನೆಲ ಹಾಸು ಹಾಕುವುದನ್ನು ನೀವು ನೋಡಿರಬಹುದು. ಬಾಗಿಲಿನಲ್ಲೇ ಚಿಕ್ಕ ಗಾತ್ರದ ನೆಲಹಾಸು (ಮ್ಯಾಟ್) ಗಳಿರುತ್ತವೆ. ಮನೆಯ ಒಳಗೆ ಬರುವಾಗ ಒದ್ದೆ ಕಾಲು ಅಥವಾ ಧೂಳು ಒರೆಸಿಕೊಂಡು ಬರಲಿ ಎಂಬ ಉದ್ದೇಶದಿಂದ ಅವುಗಳನ್ನು ಹಾಕಿರುತ್ತೇವೆ. ಆದರೆ, ಹಾಲ್ ನಲ್ಲಿ ಸೋಫಾದ ಮೇಲೆ ಅಥವಾ ನೆಲದ ಮೇಲೆ ಕುಳಿತು ವಿಶ್ರಮಿಸುವ ಜಾಗದಲ್ಲಿ ಉತ್ತಮ ಗುಣಮಟ್ಟದ ರತ್ನಗಂಬಳಿಯನ್ನೇ ನೆಲಹಾಸು ರೂಪದಲ್ಲಿ ಬಳಸುವುದು ವಾಡಿಕೆ. ಇದರಿಂದ  ಮನೆಯ ಅಂದವೂ ಹೆಚ್ಚುವ ಜತೆಗೆ, ಮಕ್ಕಳು, ವೃದ್ಧರು ಕೂಡ ಆತಂಕವಿಲ್ಲದೆ ಓಡಾಡಬಹುದಾಗಿದೆ.

ಹೊಂದಾಣಿಕೆಯ ಹಾಸಿಗೆ
ಮನೆಯ ಹಾಲ್ ಗಲೀಜಾಗದಂತೆ ಹಾಗೂ ಟೈಲ್ಸ್ ಗಳ ಥಂಡಿ ಕಾಲಿಗೆ ತಾಗದಂತೆ ರತ್ನಗಂಬಳಿ ಬಳಸುವರು. ಮಾರುಕಟ್ಟೆಯಲ್ಲಿ ಕಡಿಮೆಗೆ ಸಿಕ್ಕಿತೆಂದು ಯಾವ್ಯಾವುದೋ ನೆಲಹಾಸುಗಳನ್ನು ತಂದು ಹಾಕಿದರೆ ಅದು ಮನೆಯ ಅಂದಗೆಡಿಸುತ್ತದೆ. ಮನೆಯ ಗೋಡೆ, ನೆಲದ ಕಲ್ಲುಹಾಸು, ಸೋಫಾ ಅಥವಾ ಇತರ ಪೀಠೋಪಕರಣಗಳಿಗೆ ಒಪ್ಪುವಂತಹ ರತ್ನಗಂಬಳಿಗಳನ್ನು ಆಯ್ಕೆ ಮಾಡಬೇಕು. ಊಟದ ಮೇಜು, ಕುಳಿತುಕೊಳ್ಳುವ ಕುರ್ಚಿಗಳು, ಸೋಫಾಗಳಿಗೂ ಋತುಮಾನಕ್ಕೆ ತಕ್ಕಂತೆ ಹಾಸುಗಳನ್ನು ಬದಲಿಸಿದರೆ ಮನೆಯ ಅಂದವೂ ಹೆಚ್ಚುತ್ತದೆ, ಕಾಲಮಾನಕ್ಕೆ ತಕ್ಕಂತೆ ಆರಾಮದಾಯಕ ಅನುಭವವನ್ನೂ ನೀಡುತ್ತದೆ.

ಹಿತಕರ ದಿಂಬುಗಳ ಬಳಕೆ
ಮೈಮೇಲೆ ಸ್ವೆಟರ್, ಕಾಲುಚೀಲ ಇತ್ಯಾದಿಗಳನ್ನು ಧರಿಸಿ ಚಳಿಗಾಲದಲ್ಲಿ ಬೆಚ್ಚಗಿರಲು ಬಯಸುವ ನಾವು ಸೋಫಾ, ಕುರ್ಚಿಗಳ ಮೇಲೆ ಅಥವಾ ಕಾಟಿನ ಮೇಲೆ ಕುಳಿತುಕೊಳ್ಳುವಾಗ ಒರಗಿಕೊಳ್ಳಲು ಮೆತ್ತನೆಯ ದಿಂಬುಗಳನ್ನೂ ಬಳಸುವುದು ಸೂಕ್ತ. ಇದರಿಂದ ಬೆನ್ನಿಗೆ ಹೆಚ್ಚು ಆರಾಮದಾಯಕ ಅನುಭವ ಆಗುತ್ತದೆ. ದಿಂಬಿನ ಹೊದಿಕೆಗಳು ಮೆತ್ತಗಿರಬೇಕು. ಬಣ್ಣಗಳು ಆಕರ್ಷಕವಾಗಿರಬೇಕು. ಎಣ್ಣೆ, ಕೊಳೆ ಮೆತ್ತಿಕೊಂಡಿರಬಾರದು. ಅವುಗಳನ್ನು ಆಗಾಗ ತೊಳೆದು, ಬಿಸಿಲಲ್ಲಿ ಒಣಗಿಸಿದರೆ ಹಿತಕರವಾಗಿರುತ್ತವೆ. ಆಗ ದೀರ್ಘಾವಧಿ ಬಳಸಿದರೂ ಯಾವುದೇ ತೊಂದರೆ ಇರುವುದಿಲ್ಲ.

ಸಸ್ಯಗಳಿಗೂ ಜಾಗವಿರಲಿ
ಚಳಿಗಾಲ ಎಂದಾಕ್ಷಣ ಮನೆಯ ಎಲ್ಲ ಕಿಟಕಿ-ಬಾಗಿಲುಗಳನ್ನು ನಾವು ಮುಚ್ಚಿಬಿಡುತ್ತೇವೆ. ಮನೆಯೊಳಗೂ ಮೆತ್ತನೆಯ ಹಾಗೂ ಬೆಚ್ಚನೆಯ ವಾತಾವರಣ ಸೃಷ್ಟಿಸಿ ಎಲ್ಲವೂ ಅಂದವಾಗಿದೆ ಎಂದು ಭಾವಿಸುತ್ತೇವೆ, ಅದಕ್ಕೆ ಪೂರಕವಾಗಿ ಮನೆಯ ಮೂಲೆಯಲ್ಲಿ, ಗಾಳಿ-ಬೆಳಕು ಆಡುವಂಥ ಸ್ಥಳದಲ್ಲಿ ಗಿಡಗಳನ್ನಿಟ್ಟು ಜೋಪಾನ ಮಾಡುವುದು ಒಳ್ಳೆಯದು. ಇದರಿಂದ ಮನೆಯ ವಾತಾವರಣ ಆಮ್ಲಜನಕದಿಂದ ಸಮೃದ್ಧವಾಗಿರುತ್ತದೆ. ಹಸುರು ಬಣ್ಣದಿಂದಾಗಿ ಆಹ್ಲಾದವೂ ಉಂಟಾಗುತ್ತದೆ.

ಪದರುಳ್ಳ ಕಂಬಳಿಗಳ ಬಳಕೆ
ದಕ್ಷಿಣ ಭಾರತದಲ್ಲಿ ಪದರುಗಳುಳ್ಳ ಹೊದಿಕೆಗಳನ್ನು ಮಾಡುವ ರೂಢಿ ಬಹಳ ಕಡಿಮೆ. ನಾವು ಬಹುತೇಕ ಸೊಲಲಾಪುರ ಅಥವಾ ಸ್ಥಳೀಯವಾಗಿ ತಯಾರಿಸಿದ ಏಕ ಪದರಿನ ಹಾಸಿಗೆ, ಹೊದಿಕೆ ಬಳಕೆ ಮಾಡುತ್ತೆವೆ. ಆದರೆ, ಚಳಿಗಾಲಕ್ಕೆ ಅನುಕೂಲವಾಗುವಂತೆ ಉತ್ತರ ಭಾರತೀಯರು ಬಳಸುವ ಪದರುಳ್ಳ ಕಂಬಳಿಗಳನ್ನು ಬೆಚ್ಚನೆಯ ಅನುಭವ ನೀಡುವ ಜತೆಗೆ ನಿದ್ರೆಯ ವೇಳೆ ಯಾವುದೋ ತೊಂದರೆ ಆಗದಂತೆ ತಡೆಯುತ್ತವೆ.

ಹೊದಿಕೆಗಳು ಸ್ವಚ್ಛವಾಗಿರಲಿ
ಮನೆಯಲ್ಲಿ ಬಳಸುವ ವಸ್ತುಗಳು ಸಾಧ್ಯವಾದಷ್ಟೂ ಧೂಳಿನಿಂದ ಮುಕ್ತವಾಗಿರುವಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಅದರಲ್ಲೂ ಮುಖ್ಯವಾಗಿ ನಮ್ಮ ಹಾಸಿಗೆ, ಹೊದಿಕೆ, ತಲೆದಿಂಬು, ಸೋಫಾದ ಮೇಲುಹಾಸು ಇತ್ಯಾದಿಗಳನ್ನು ಆದಷ್ಠೂ ಧೂಳುಮುಕ್ತವಾಗಿರಿಸಿ. ಬಿಸಿಲಿದ್ದಾಗ ಸ್ವಚ್ಛಗೊಳಿಸಿ ಚೆನ್ನಾಗಿ ಒಣಗಿಸಬೇಕು. ಇಲ್ಲದಿದ್ದರೆ ಚಳಿಯ ವಾತಾವರಣದಲ್ಲಿ ನಿಮಗೆ ಅಲರ್ಜಿ, ಶೀತ, ಒಣಕೆಮ್ಮು ಇತ್ಯಾದಿಗಳು ಕಾಡುತ್ತವೆ. ಧೂಳು ದೇಹಕ್ಕೆ ಸೇರಿದರೆ ಹಲವು ಬಗೆಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮನೆಯ ಇತರ ಕಡೆಗಳಲ್ಲೂ ಧೂಳು, ಬಲೆ ಇಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.

Share on:

City Information

(Private)