ಹಳದಿ ಬಣ್ಣದ ಕರಬೂಜ ಹಣ್ಣಿನಲ್ಲಿ ನೀರಿನಾಂಶ ಹೇರಳವಾಗಿದೆ. ಆದ್ದರಿಂದ ಈ ಹಣ್ಣು ಬೇಸಗೆಗೆ ಸೂಕ್ತ. ಇದು ದೇಹಕ್ಕೆ ತಂಪು. ಜತೆಗೆ ಇದರಲ್ಲಿ ಪೊಟಾಶಿಯಂ, ವಿಟಮಿನ್ ಎ ಹಾಗೂ ಸಿ ಧಾರಾಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
- ಕಲ್ಲಂಗಡಿಯಂತೆ ಈ ಹಣ್ಣು ಕೂಡ ಬೇಸಗೆಯಲ್ಲಿ ನಿರ್ಜಲೀಕರಣ ಆಗದಂತೆ ನಮ್ಮ ದೇಹವನ್ನು ರಕ್ಷಿಸುತ್ತದೆ. ಹಾಗೇ ತೂಕ ಇಳಿಸಿಕೊಳ್ಳುವವರಿಗೂ ಇದು ಉತ್ತಮ ಆಯ್ಕೆ. ಕರಬೂಜ ಹಣ್ಣು ಅತಿ ಕಡಿಮೆ ಕೊಬ್ಬು ಹಾಗೂ ಕ್ಯಾಲೊರಿ ಹೊಂದಿದೆ. ಇದರಲ್ಲಿನ ನಾರಿನಾಂಶ ಬೇಗ ಹಸಿವಾಗುವುದನ್ನು ತಡೆಯುತ್ತದೆ. ಜೀರ್ಣಶಕ್ತಿಯನ್ನುಹೆಚ್ಚುಮಾಡುತ್ತದೆ.
- ಈ ಹಣ್ಣನ್ನು ಮಧುಮೇಹಿಗಳೂ ಸೇವಿಸಬಹುದು. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮಪ್ರಮಾಣದಲ್ಲಿ ಉಳಿಸುತ್ತದೆ.
- ಕರಬೂಜದಜ್ಯೂಸ್ ಕುಡಿಯುತ್ತಿದ್ದರೆ ಕಜ್ಜಿ, ಗಜಕರ್ಣದಂತಹ ಚರ್ಮರೋಗ ವಾಸಿಯಾಗುತ್ತದೆ.
- ಕರಬೂಜ ರಕ್ತವನ್ನು ಶುದ್ಧ ಮಾಡುವ ಗುಣ ಹೊಂದಿದೆ. ಪಿತ್ತವನ್ನೂ ಕಡಿಮೆ ಮಾಡುತ್ತದೆ.
- ಇದರಲ್ಲಿನ ಪೊಟಾಶಿಯಂರಕ್ತದೊತ್ತಡ ನಿಯಂತ್ರಿಸುತ್ತದೆ.
- ವಿಟಮಿನ್ ಸಿ ಹಾಗೂ ಬೀಟಾ ಕೆರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ಕ್ಯಾನ್ಸರ್ ಕಾರಕ ಕಣಗಳನ್ನು ಹಿಮ್ಮೆಟ್ಟಿಸಬಲ್ಲದು.
- ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸಬಲ್ಲದು.
- ಈ ಹಣ್ಣಿನ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ.
- ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಹಣ್ಣು ಸೇವನೆಮಾಡಿದರೆ ಪರಿಹಾರ ಕಾಣಬಹುದು.
- ಕರಬೂಜ ಹಣ್ಣು ಸೌಂದರ್ಯವರ್ಧಕವೂ ಆಗಿದೆ. ನೀರಿನಾಂಶ ಹೆಚ್ಚಿರುವ ಈ ಹಣ್ಣಿನ ಸೇವನೆಯಿಂದ ಚರ್ಮ ಕಾಂತಿಯುಕ್ತಯಾಗುತ್ತದೆ. ವಿಟಮಿನ್ ಸಿ ಚರ್ಮ ಸುಕ್ಕಾಗದಂತೆ ಹಾಗೂ ಅಕಾಲ ಮುಪ್ಪು ಆವರಿಸದಂತೆ ಮಾಡುತ್ತದೆ.
- ವಿಟಮಿನ್ ಬಿ ಅಂಶ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ. ಶ್ಯಾಂಪೂ ಹಾಕಿ ಕೂದಲು ತೊಳೆದು ಕರಬೂಜಹಣ್ಣಿನ ತಿರುಳಿನಿಂದ ಮಸಾಜ್ ಮಾಡಿ, 10 ನಿಮಿಷಗಳ ಬಳಿಕ ತೊಳೆಯಬೇಕು.