ಜಾಯಿಕಾಯಿ, ಕಾಳು ಮೆಣಸು, ಶ್ರೀಗಂಧವನ್ನು ಅರೆದು ಮೊಡವೆಗೆ ಹಚ್ಚಬಹುದು.
ದಾಳಿಂಬೆ ಹಣ್ಣಿನ ಬೀಜವನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಗುಳ್ಳೆ ವಾಸಿಯಾಗುತ್ತದೆ.
ಮಂಜಿಷ್ಚ, ರಕ್ತಚಂದನ, ಶ್ರೀಗಂಧ, ಅರಳೀ ಮರದ ಕುಡಿಯನ್ನು ಹಾಲಿನೊಂದಿಗೆ ಅರೆದು ಮೊಡವೆಗೆ ಹಚ್ಚಬಹುದು.
ಧನಿಯಾ ಹೆಸರುಕಾಳನ್ನು ಪುಡಿಮಾಡಿ ದಿನಕ್ಕೆ ಮೂರ್ನಾಲ್ಕು ಬಾರಿ ಮುಖ ತೊಳೆಯವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗಿ ಮೊಡವೆ ಕಡಿಮೆಯಾಗುತ್ತದೆ.
ಮುಖದ ಸ್ಪಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ
ಮೊಡವೆಯನ್ನು ಆಗಾಗ ಮುಟ್ಟಿಕೊಳ್ಳುವುದು, ಚಿವುಟುವುದು ಮಾಡಬಾರದು.