Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಆರೋಗ್ಯ » ಯೋಗ

ಪ್ರಾಣಾಯಾಮ ಎಂದರೇನು ?


09 Sep 2020

ಶ್ವಾಸೋಚ್ವಾಸ ಇಲ್ಲದೆ ಯಾವುದೇ ಜೀವರಾಶಿಗಳಿರಲು ಸಾಧ್ಯವಿದೆಯೇ?

ಸಸ್ಯಗಳಿಗೂ ಶ್ವಾಸೋಚ್ವಾಸಗಳಿವೆ.

ಇದರ ಆಧಾರದಲ್ಲೇ ಆಯುಷ್ಯ ನಿಂತಿರುವುದು.

ಪ್ರಾಣಿಗಳ ಶ್ವಾಸೋಚ್ವಾಸಗಳು ಬೇರೆ ಬೇರೆ ರೂಪದಲ್ಲಿವೆ. ಮನೆಯಲ್ಲಿ ಸಾಕುನಾಯಿ, ಬೆಕ್ಕು, ಆಕಳುಗಳ ಆಯುಷ್ಯ ಅಬ್ಬಾ ಎಂದರೆ ಹದಿನೈದು, ಹದಿನಾರು ವರ್ಷ. ಅದರಲ್ಲಿ ಬೆಕ್ಕಿನದ್ದು ಬಹಳ ಕಡಿಮೆ. ಆಕಳು 22 ವರ್ಷ ಬದುಕಿದ್ದೂ ಇದೆ.

ಇನ್ನು ಮನುಷ್ಯನದ್ದು. ನಿಯಮ 120 ವರ್ಷ.  ಆದರೆ ಬದುಕುವುದು ಸಾಮಾನ್ಯವಾಗಿ ಎಂಭತ್ತೇ ವರ್ಷ. ನೂರು ದಾಟಿದವರೂ ಇದ್ದಾರೆ ಮತ್ತು ಐವತ್ತು ದಾಟದವರೂ ಇದ್ದಾರೆ ಅನ್ನಿ. ಇಂಥ ವ್ಯತ್ಯಾಸಕ್ಕೆ ಉಸಿರಾಟವೇ ಕಾರಣ.

ನಮ್ಮ ಪೂರ್ವಜರು ಈ ಶ್ವಾಸೋಚ್ವಾಸದ ವಿಚಾರದಲ್ಲಿ ಬಹಳ ಅಧ್ಯಯನ ಮಾಡಿದ್ದರು. ಇದರ ನಿಯಂತ್ರಣಕ್ಕಾಗಿ ಯೋಗಾಭ್ಯಾಸ ಶುರುವಾಯಿತು. ಅದರಲ್ಲಿ ಪ್ರಾಣಾಯಾಮ ಕ್ರಿಯೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ.

ಶ್ವಾಸೋಚ್ವಾಸದ ನಿಯಮವನ್ನು ಪ್ರಾಣಾಯಾಮದ ಅಭ್ಯಾಸದ ಮೂಲಕ ರೂಢಿಸಿಕೊಳ್ಳಬಹುದು. ಪ್ರಾಣ ಎಂದರೆ ಆಮ್ಲಜನಕ. ಇದರ ಸಂಚಾರವೇ ಆಯಾಮ. ಹಾಗಾಗಿ ಪ್ರಾಣ + ಆಯಾಮ= ಪ್ರಾಣಾಯಾಮವಾಗುತ್ತದೆ.

ನಾವು ಮೂಗಿನ ಮೂಲಕ ವಾತಾವರಣದ ಗಾಳಿಯನ್ನು ಹೀರಿಕೊಳ್ಳುತ್ತೇವೆ. ಇದರಲ್ಲಿ ದೂಳು, ವಿಷಾನಿಲಗಳೂ ಸೇರಿಕೊಂಡಿರುತ್ತವೆ. ವಾಯು ದೇಹದೊಳಗೆ ಪ್ರವೇಶಿಸಿದ ಬಳಿಕ ಅದರ ಪ್ರಕ್ರಿಯೆ ನಡೆಯುತ್ತದೆ. ಶುದ್ಧವಾದ ಆಮ್ಲಜನಕವನ್ನು ಮಾತ್ರ ನಮ್ಮ ಶ್ವಾಸಕೋಶ ಹೀರಿಕೊಳ್ಳುತ್ತದೆ. ಇದುವೇ ಪ್ರಾಣವಾಯು. ಇದು ಶ್ವಾಸಕೋಶಕ್ಕೆ ಸೀಮಿತವಲ್ಲ. ದೇಹದ ಸಕಲ ಭಾಗಗಳಿಗೂ ವಾಯುಸಂಚಾರ ಬೇಕಾಗುತ್ತದೆ. ವಾಯುವಿನ ವಿಸರ್ಜನೆ ರೋಮಕೂಪಗಳ ಮೂಲಕವೂ ಆಗುತ್ತಿರುತ್ತದೆ.

ಮೂಗಿನಲ್ಲಿ ಇಡಾ, ಪಿಂಗಳಾ ಎಂಬ ನಾಡಿಗಳಿವೆ. ಒಂದರಲ್ಲಿ ತೆಗೆದುಕೊಂಡ ವಾಯುವನ್ನು ಇನ್ನೊಂದರಲ್ಲಿ ಬಿಡಬೇಕು. ಹೀಗೆ ಮಾಡಿದರೆ ಮದ್ಯದಲ್ಲಿದ್ದ ಸುಷುಮ್ನಾ ನಾಡಿ ಹೀರಿಕೊಂಡು ದೇಹದ ಎಲ್ಲ ಭಾಗಗಳಿಗೂ ಕಳುಹಿಸುತ್ತದೆ. ಇದರ ನಿಯಂತ್ರಣ ವ್ಯವಸ್ಥೆಯನ್ನು ಪ್ರಾಣಾಯಾಮದ ಮೂಲಕ ಸರಿಪಡಿಸಿಕೊಳ್ಳಬಹುದು.

ಇನ್ನು ಈ ವಾಯುವಿನಲ್ಲಿ ಐದು ವಿಧ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬುದಾಗಿ. ಇದರೊಳಗೂ ಐದು ಉಪವಾಯುಗಳಿವೆ. ಅವುಗಳು ಕ್ರಮವಾಗಿ, ನಾಗ, ಕೂರ್ಮ,  ಕೃಕರ, ದೇವದತ್ತ ಹಾಗೂ ಧನಂಜಯ. ಈ ಪ್ರಾಣವಾಯು ಹೃದಯದಲ್ಲೂ,, ಅಪಾನವು ಗುದ ಪ್ರದೇಶದಲ್ಲೂ, ಸಮಾನವು ನಾಭಿಯಲ್ಲೂ, ಉದಾನವು ಕಂಠದಲ್ಲೂ, ವ್ಯಾನವು ಶರೀರದ ಸಕಲ ಭಾಗಕ್ಕೂ ಸಂಚರಿಸುತ್ತದೆ.

ನಾಗವಾಯು ವಾಗೀಂದ್ರ್ಯಕ್ಕೂ, ಕೂರ್ಮವು ಉನ್ಮೀಲನ ಕ್ರಿಯೆಗೂ, ಕೃಕರವು ಹಸಿವೆಗೂ, ದೇವದತ್ಯವು ಆಕಳಿಕೆ, ಬಿಕ್ಕಳಿಕೆ, ಆಲಸ್ಯಕ್ಕೂ, ಧನಂಜಯವು ವ್ಯಾನದ ಉಪವಾಯುವಾಗಿ ದೇಹದ ಸಕಲ ಭಾಗಕ್ಕೂ ಸಂಚರಿಸುತ್ತದೆ.

ಈ ಪಂಚವಾಯು ಮತ್ತು ಅದರ ಉಪವಾಯು ಸೇರಿ ಹತ್ತು ವಿಧದ ವಾಯುಗಳು ಆಗುತ್ತವೆ. ಇದಲ್ಲದೆ ಮಾರುತ (ಮಾ+ ರುದ) ಅಂದರೆ ಅಳಬೇಡ ಎಂಬ ಅರ್ಥದಲ್ಲಿ ಈ ವಾಯುವಿಗೆ ಹೆಸರು ಬಂತು. ಇದರಲ್ಲಿ 49 ವಿಧಗಳಿವೆ. ಪಂಚಪ್ರಾಣಗಳೂ ಸೇರಿ ಈಗ 54 ರೂಪದ ವಾಯುಗಳಾಯಿತು. ಈ ವಾಯುಗಳೆಲ್ಲ ದೇಹದೊಳಗೆ ಅಷ್ಟದಿಕ್ಪಾಲತ್ವ, ಅವರ ಉಪದಿಕ್ಪಾಲತ್ವಗಳ ಕೆಲಸ ಮಾಡುತ್ತವೆ.

ವಸಿಷ್ಠಾದಿ ಋಷಿಗಳು ಈಗಲೂ ಸೂಕ್ಷ್ಮ ಶರೀರದಲ್ಲಿ ಬದುಕಿರುವುದು ಈ ಪ್ರಾಣದ ಆಯಾಮ ನಿಯಮದಲ್ಲಿ. ನಾವೂ ಬದುಕಿರುವವರೆಗೆ ಆರೋಗ್ಯಪೂರ್ಣವಾಗಿರಲು ಪ್ರಾಣಾಯಾಮ ನಿಯಮವನ್ನು ಪಾಲಿಸಿದರೆ ಸೂಕ್ತ. ಇನ್ನೊಂದು ಮುಖದಲ್ಲಿ ನೋಡಿದಾಗ, ಈ ಪ್ರಾಣದ ಆಯಾಮ ಕ್ರಿಯೆ ರೂಢಿಸಿಕೊಂಡರೆ ತ್ರಿಕಾಲ ಜ್ಞಾನ ಪ್ರಾಪ್ತಿಯೂ ಆಗುತ್ತದೆ. ಇದಕ್ಕೆಲ್ಲ ನಿತ್ಯಾಭ್ಯಾಸ ಬೇಕು. ಹಾಗಾಗಿ, ಭಾರತದ ಯೋಗಕ್ರಿಯೆಗೆ ಇಷ್ಟು ಮಹತ್ವ ಬಂದದ್ದು. ಯೋಗವು ಯಾವುದೇ ಮತ ಸಂಪ್ರದಾಯಗಳಿಗೆ ಸೀಮಿತವಲ್ಲ. ಇದು ಸಂಪೂರ್ಣವಾದ ವೈದಿಕ ಸನಾತನ ಧರ್ಮದ ಪಾಲನೆಗಾಗಿಯೇ ಇರುವಂಥದ್ದು. ಇದಕ್ಕಾಗಿಯೇ ಪುರಾತನರು ಶರೀರಮಾಧ್ಯಂ ಖಲುಧರ್ಮಸಾಧನಂ ಎಂದಿದ್ದಾರೆ.

Share on:

City Information

(Private)