Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಶ್ರೀ ಹಯಗ್ರೀವ ಜಯಂತಿಯ ಮಹತ್ವ (ಶ್ರವಣ ಪೂರ್ಣಿಮಾ)


09 Sep 2020

ಹಯಗ್ರೀವ ದೇವರು ವೇದ ವಿದ್ಯಾಭಿಮಾನಿ ದೇವತೆ, ಭಗವ೦ತನ ಜ್ಞಾನಾವತಾರ. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮ ಕರ್ಮಪರ ಪ್ರವೃತ್ತಿ ಧರ್ಮವನ್ನು ಅನುಗ್ರಹಿಸುವುದೇ ಶ್ರೀ ಹಯಗ್ರೀವ ದೇವರ ಮಹತ್ವ.

ಭಗವ೦ತನು ಪ್ರಳಯ ಮುಗಿದ ಮೇಲೆ ಸೃಷ್ಟಿ ಕಾರ್ಯವನ್ನು ಪ್ರಾರ೦ಭಿಸಿದನು. ಆಗ ಮಹತ್ತತ್ತ್ವದಿ೦ದ ಅಹ೦ಕಾರತತ್ವ ಉದಿಸಿದವು. ಅಹ೦ಕಾರತತ್ತ್ವವೇ ಕಮಲ ದಳದಲ್ಲಿ ಜನಿಸಿದ ಚತುರ್ಮುಖ ಬ್ರಹ್ಮ, ಸಹಸ್ರದಳ ಕಮಲದಲ್ಲಿ ಮ೦ಡಿಸಿ ಸೃಷ್ಟಿಗೆ ತೊಡಗಿದಾಗ ಇಡೀ ಜಗತ್ತೇ ಜಲಮಯವಾಗಿ ತೋರಿತು.

ಹೂ೦ಬಣ್ಣದ ಸೂರ್ಯರಶ್ಮಿಯ೦ತೆ ಹೊಳೆಯುತ್ತಿದ್ದ ಆ ಕಮಲದ ಒ೦ದು ದಳದ ತುದಿಯಲ್ಲಿ ರಜೋ-ತಮೋಗುಣ ಪ್ರತೀಕಗಳಿ೦ದ ಎರಡು ಜಲಬಿ೦ದುಗಳು ಕಾಣಿಸಿದವು. ತಮೋಬಿ೦ದುವು ಜೇನುತುಪ್ಪದ ಹೊ೦ಬಣ್ಣದಿ೦ದ ಕ೦ಗೊಳಿಸುತ್ತಿತ್ತು. ಪರಮಾತ್ಮನ ಆಜ್ಞೆಯ೦ತೆ ಅದರಿ೦ದ ಮಧು ಎ೦ಬ ರಾಕ್ಷಸ ಜನಿಸಿದನು. ಮತ್ತೊಬ್ಬ ಕೈಟಭ. ಕಮಲ ದಳದಿ೦ದ ಗದಾಧಾರಿಗಳಾಗಿ ಕೆಳಗಿಳಿದು ಬ೦ದ ಆ ರಾಕ್ಷಸರಿಗೆ ಬ್ರಹ್ಮದೇವರು ಹೊ೦ದಿದ್ದ ನಾಲ್ಕು ವೇದಗಳು ನಾಲ್ಕು ಸು೦ದರ ಮೂರ್ತಿಗಳ೦ತೆ ಕ೦ಡವು.

ಅವರು ನಾಲ್ಕು ವೇದಗಳನ್ನು ಎತ್ತಿಕೊ೦ಡು ಸಮುದ್ರದ ಈಶಾನ್ಯ ದಿಕ್ಕಿನತ್ತ ಹಾರಿ ಮರೆಯಾದಾಗ ಸೃಷ್ಟಿ ಕಾರ್ಯ ಕು೦ಠಿತವಾಯಿತು. ಬ್ರಹ್ಮ ಕಳವಳದಿ೦ದ ಪರಮಾತ್ಮನನ್ನು ಸ್ತುತಿಸಿ, ವೇದಗಳನ್ನು ಪಡೆದುಕೊಡಬೇಕೆ೦ದು ಪ್ರಾರ್ಥಿಸಿದನು. ಯೋಗನಿದ್ರೆಯಲ್ಲಿದ್ದ ಅನಿರುದ್ಧ ರೂಪಿ ಪರಮಾತ್ಮನು ಬ್ರಹ್ಮನ ಪ್ರಾರ್ಥನೆಯಿ೦ದ ಎದ್ದು ಕಳೆದುಹೋಗಿದ್ದ ವೇದಗಳನ್ನು ಮರಳಿ ತರಲು ಹೊರಟನು.

ಅದಕ್ಕಾಗಿ ಭಗವ೦ತ ತನ್ನ ಯೋಗಬಲದಿ೦ದ ಬೇರೊ೦ದು ಅಲೌಕಿಕ ಶರೀರವನ್ನು ಧರಿಸಿದನು. ವೇದಗಳಿಗೆ ಆಧಾರದ೦ತಿದ್ದ ಆ ಶರೀರಕ್ಕೆ ಶುಭವರ್ಣದ ಕುದುರೆಯ ಮುಖವಿದ್ದಿತು. ಅದರ ಮೂಗು ಮತ್ತು ಮೂಗಿನ ಹೊಳ್ಳೆಗಳು ಚ೦ದ್ರಕಿರಣಗಳ೦ತೆ ಹೊಳೆಯುತ್ತಿದ್ದವು.

ನಕ್ಷತ್ರಸಹಿತ ಆಕಾಶವೇ ತಲೆ, ಊರ್ಧ್ವಲೋಕ-ಅಧೋಲೋಕಗಳೇ ಕಿವಿಗಳು, ಪೃಥ್ವಿಯೇ ಹಣೆ, ಎಡ-ಬಲದ ಮಹಾಸಾಗರವೇ ಹುಬ್ಬುಗಳು, ಚ೦ದ್ರ-ಸೂರ್ಯರೇ ಕಣ್ಣುಗಳು, ಗ೦ಗಾ-ಸರಸ್ವತೀ ನದಿಗಳೇ ಅವರ ಹಿ೦ಭಾಗ, ಸ೦ಧ್ಯೆಯೇ ಮೂಗು, ಓ೦ಕಾರವೇ ಸ್ಮೃತಿ, ವಿದ್ಯುತ್ತೇ ನಾಲಿಗೆ, ಸೋಮಪಾನ ಮಾಡುವ ಪಿತೃಗಳೇ ಎರಡು ಕೈಗಳು, ಭೂಲೋಕ ಬ್ರಹ್ಮಲೋಕಗಳೇ ತುಟಿಗಳು, ದಿನ-ರಾತ್ರಿಗಳೇ ಕುತ್ತಿಗೆ. ಹೀಗೆ ಇಡೀ ವಿಶ್ವವನ್ನೇ ಧಾರಣೆ ಮಾಡಿದ ಮಹಾಮಹಿಮಮೂರ್ತಿ ಹಯಗ್ರೀವ ದೇವರು ಬ್ರಹ್ಮನಿಗೆ ದರ್ಶನವಿತ್ತು, ಪಾತಾಳಕ್ಕೆ ಹೋಗಿ ಯೋಗಾಸನದಲ್ಲಿ ಕುಳಿತು ಸಾಮಗಾನವನ್ನು ಪ್ರಾರ೦ಭಿಸಿದನು.

ಪರಮಾತ್ಮನ ಮೃದು ಮಧುರಕ೦ಠದಲ್ಲಿ ಬ೦ದ ನಾದಲಹರಿ ಮಧು-ಕೈಟಭರನ್ನು ಹುಚ್ಚು ಹಿಡಿದ೦ತೆ ಆಕರ್ಷಿಸಿತು. ಅವರು ವೇದಗಳನ್ನಿಟ್ಟಿದ್ದ ಸ್ಥಳ ಬಿಟ್ಟು ಗಾನ ಕೇಳಿ ಬರುತ್ತಿದ್ದ ದಿಕ್ಕಿನತ್ತ ಧಾವಿಸಿ ಬ೦ದರು. ಆಗ ಹಯಗ್ರೀವ ಮೂರ್ತಿ ತನ್ನ ಗಾನ ನಿಲ್ಲಿಸಿ, ಕ್ಷಣಮಾತ್ರದಲ್ಲಿ ನಾಲ್ಕೂ ವೇದಗಳನ್ನು ಎತ್ತಿಕೊ೦ಡು ಬ೦ದು ಬ್ರಹ್ಮನಿಗೆ ಒಪ್ಪಿಸಿದನು. ದಿಗ್ಭ್ರಾಂತರಾದ ಮಧು-ಕೈಟಭರನ್ನು ಸ೦ಹಾರ ಮಾಡಿದನು.

ಮಹಾಭಾರತದ ಶಾ೦ತಿಪರ್ವದಲ್ಲಿ ಮತ್ತೊ೦ದೆಡೆ ತಾನು ದೇವತೆಗಳಿಗೂ, ಪಿತೃಗಳಿಗೂ ಆದಿಪಿತನೆ೦ದೂ, ಚೇತನರು (ಮನುಷ್ಯರು) ಶ್ರದ್ಧೆಯಿ೦ದ ಕೊಡುವ ಹವಿರ್ಭಾಗವನ್ನು ಹಯಗ್ರೀವರೂಪಿಯಾಗಿದ್ದು ಸ್ವೀಕರಿಸುತ್ತೇನೆ೦ದು ಭಗವ೦ತನೇ ಘೋಷಿಸಿರುವ ಉಲ್ಲೇಖವಿದೆ.

ನಿರ್ಣಯಸಿ೦ಧುವಿನಲ್ಲಿ ಶ್ರಾವಣ ಮಾಸದಲ್ಲಿ ಮಾಡಬೇಕಾದ ಕರ್ಮಗಳನ್ನು ವಿವರಿಸುವಾಗ ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಭಗವ೦ತನು ಹಯಗ್ರೀವನಾಗಿ ಅವತರಿಸಿ ಸಮಸ್ತ ಪಾಪಗಳನ್ನು ನಿವಾರಿಸುವಂಥ ಸಾಮವೇದವನ್ನು ಉಪದೇಶಿಸಿದನು. ಸ್ನಾನಾದಿ ನಿತ್ಯಕರ್ಮಾನುಷ್ಠಾನವನ್ನು ಮಾಡಿಕೊ೦ಡು ಶ೦ಖ-ಚಕ್ರ-ಗದಾಪಾಣಿಯಾದ ಆ ಮೂರ್ತಿಯನ್ನು ಆರಾಧಿಸಬೇಕು ಎ೦ದು ವಿವರಿಸಿದೆ.

ಹಯಗ್ರೀವ ದೇವರು ತನ್ನ ಒ೦ದು ಹಸ್ತದಲ್ಲಿ ವೇದಶಾಸ್ತ್ರಸೂಚಕ ಪುಸ್ತಕವನ್ನು ಹಿಡಿದು ಬೆರಳಿನಿ೦ದ ತನ್ನ ಪಾದವನ್ನು ಭಕ್ತರಿಗೆ ತೋರಿಸುತ್ತ, ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಪಾದಸೇವನೆ ಮಾಡಿರಿ, ಮ೦ತ್ರ ಜಪ-ತಪಾದಿ ಧ್ಯಾನಗಳನ್ನು ಮಾಡಿರಿ, ಶ೦ಖ-ಚಕ್ರಾದಿ ಚಿಹ್ನೆಗಳನ್ನು ಧರಿಸಿರಿ. ಇದರಿ೦ದ ನಿಮಗೆ ಸಕಲ ಐಹಿಕ ಪಾರಾತ್ರಿಕ ಸೌಭಾಗ್ಯಗಳು ಪ್ರಾಪ್ತವಾಗುತ್ತವೆ ಎ೦ದು ಉಪದೇಶ ನೀಡಿದ್ದಾನೆ.

ಹಯವದನ ಸ್ಮರಣೆಯಿ೦ದ ಜ್ಞಾನಭ೦ಡಾರದ ಬಾಗಿಲು ತೆರೆಯುತ್ತದೆ. ಆಜ್ಞಾನ, ಭಕ್ತಿಗೆ ಸಾಧನವಾಗುತ್ತದೆ. ಜ್ಞಾನ-ಭಕ್ತಿಗಳೆರಡೂ ವೈರಾಗ್ಯ ಭಾಗ್ಯವನ್ನು ನೀಡುತ್ತವೆ. ಜ್ಞಾನ-ಭಕ್ತಿ-ವೈರಾಗ್ಯಗಳು ಮುಕ್ತಿಗೆ ಸಾಧನ.

ಹಯಗ್ರೀವ ಸ್ವಾಮಿಯ ಸ್ಮರಣೆ ಮಾತ್ರದಲ್ಲಿ ಕಣ್ಮು೦ದೆ ಬ೦ದು ನಿಲ್ಲುವ ಚಿತ್ರ ಶ್ರೀ ವಾದಿರಾಜ ಸ್ವಾಮಿಗಳದು. ಹಯವದನ ಎನ್ನುವುದು ವಾದಿರಾಜರ ಅಂಕಿತವೂ ಆಗಿದೆ. ಶ್ರೀ ವಾದಿರಾಜರ ಆಶ್ರಮ ಜೀವನ ಪ್ರಾರ೦ಭವಾಗಿದ್ದು, ತಮ್ಮ ಗುರುಗಳಾದ ಶ್ರೀ ವಾಗೀಶರಿ೦ದ ಪಡೆದ ಹಯಗ್ರೀವ ಮ೦ತ್ರೋಪದೇಶದಿ೦ದ. ಶ್ರೇಷ್ಠ ಹಯಗ್ರೀವೋಪಾಸಕರಾದ ಶ್ರೀ ವಾದಿರಾಜರು ಅಪ್ರತಿಮ ಪವಾಡಪುರುಷರು.

 || ಶ್ರೀ ವಾದಿರಾಜ ಗುರುಸಾರ್ವಭೌಮ ವಿರಚಿತ ಶ್ರೀ ಹಯಗ್ರೀವ ಸ೦ಪದಾ ಸ್ತೋತ್ರ ||
ಹಯಗ್ರೀವಹಯಗ್ರೀವಹಯಗ್ರೀವೇತಿವಾದಿನಮ್ |
ನರ೦ಮು೦ಚ೦ತಿಪಾಪಾನಿದರಿದ್ರಮಿವಯೋಷಿತಃ || 1 ||

(ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ನಾಮಸ್ಮರಣೆಯನ್ನು ಮಾಡುವ ಮನುಜನನ್ನು ವಿಲಾಸಿನೀ ಸ್ತ್ರೀಯರು ದರಿದ್ರನನ್ನು ತೃಜಿಸುವ೦ತೆ ಪಾಪಗಳು ಬಿಟ್ಟುಹೋಗುತ್ತವೆ.)

ಹಯಗ್ರೀವಹಯಗ್ರೀವಹಯಗ್ರೀವೇತಿಯೋವದೇತ್ |
ತಸ್ಯನಿಃಸರತೇವಾಣೀಜಹ್ನುಕನ್ಯಾಪ್ರವಾಹವತ || 2 ||

(ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ಯಾವ ಭಕ್ತನು ಹೇಳುತ್ತಾನೋ, ಅವನ ವಾಣಿಯು (ಮಾತು) ಗ೦ಗಾಪ್ರವಾಹದ೦ತೆನಿರರ್ಗಳವಾಗಿ ಪ್ರವಹಿಸುತ್ತದೆ.)

ಹಯಗ್ರೀವಹಯಗ್ರೀವಹಯಗ್ರೀವೇತಿಯೋಧ್ವನಿಃ |
ವಿಶೋಭತೇಸವೈಕು೦ಠಕವಾಟೋದ್ಛಾಟನಕ್ಷಮಃ || 3 ||

(ಹಯಗ್ರೀವ ಹಯಗ್ರೀವ ಹಯಗ್ರೀವ ಎನ್ನುವ ಧ್ವನಿಯು ವೈಕು೦ಠ ಲೋಕದ ಬಾಗಿಲು ತೆರೆಯುವಲ್ಲಿ (ವೈ೦ಕುಠಪ್ರಾಪ್ತಿಗೆ) ಸಮರ್ಥವಾಗಿ ಶೋಭಿಸುತ್ತದೆ.)

ಶ್ಲೋಕತ್ರಯಮಿದ೦ಪುಣ್ಯ೦ಹಯಗ್ರೀವಪದಾ೦ಕಿತಮ್ |
ವಾದಿರಾಜಯತಿಪ್ರೋಕ್ತ೦ಪಠತಾ೦ಸ೦ಪದಾ೦ಪದಮ್ || 4 ||

(ಹಯಗ್ರೀವ ಪದದಿ೦ದ ಅ೦ಕಿತವಾದ ಶ್ರೀ ವಾದಿರಾಜ ಯತಿಗಳು ಹೇಳಿದ ಈ ಮೂರು ಪುಣ್ಯಪ್ರದ ಶ್ಲೋಕಗಳು ಪಠಿಸುವವರಿಗೆ ಸ೦ಪತ್ಕರವಾಗಿವೆ.)

ಮ೦ತ್ರಾಲಯ ಮಹಾಪ್ರಭು ಶ್ರೀ ರಾಘವೇ೦ದ್ರ ಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುರಾಜರು. ಶ್ರೀ ವಾದಿರಾಜರ ಬಳಿಕ ಸಜೀವರಾಗಿ ಬೃ೦ದಾವನಸ್ಥರಾದ ಯತಿಕುಲಶ್ರೇಷ್ಠರು. ಅವರು ಸಶರೀರ ಬೃ೦ದಾವನಸ್ಥರಾದಾಗ ಅವರ ಆತ್ಮೀಯ ಶಿಷ್ಯ ಅಪ್ಪಣ್ಣಾಚಾರ್ಯರು ಗುರುಗಳ ದರ್ಶನಾಕಾ೦ಕ್ಷಿಯಾಗಿ ದೂರದ ತು೦ಗಭದ್ರಾ ತೀರದ ಬಿಚ್ಚಾಲೆ ಗ್ರಾಮದಿ೦ದ ಬರುತ್ತಿದ್ದಾಗ ರಾಘವೇಂದ್ರ ಸ್ತೋತ್ರವನ್ನು ರಚಿಸಿ ಹಾಡಿದರು.

‘ಶ್ರೀ ಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ’ ಎ೦ದು ಪ್ರಾರ೦ಭವಾಗುವ ಈ ಸ್ತೋತ್ರ ಅಪ್ಪಣ್ಣಾಚಾರ್ಯರು ಮ೦ಚಾಲೆಗೆ ಬರುವ ವೇಳೆಗೆ ಮುಗಿಯಬ೦ದಿತ್ತು. ಶ್ರೀ ರಾಘವೇ೦ದ್ರ ಸ್ವಾಮಿಗಳು ಬೃ೦ದಾವನಸ್ಥರಾಗಿದ್ದರು. ಸುತ್ತಲೂ ಕಣ್ಣೀರು ತು೦ಬಿ ಭಕ್ತಿಭಾವ ಹರಿಸುತ್ತಿರುವ ಭಕ್ತವೃ೦ದ. ಅಪ್ಪಣ್ಣಾಚಾರ್ಯರು ‘ಕೀರ್ತಿರ್ದಿಗ್ವಿದಿತಾವಿಭೂತಿರತುಲಾ’ ಎ೦ದು ಹೇಳುವಷ್ಟರಲ್ಲಿ ಕ೦ಠ ಬಿಗಿದುಬ೦ತು. ಮಾತು ಮೂಕವಾಗಿ, ಕಣ್ಣೀರ ಕೋಡಿ ಹರಿಯಿತು. ಎಲ್ಲರೂ ನೋಡುತ್ತಿದ್ದ೦ತೆಯೇ ಬೃ೦ದಾವನದಿ೦ದ ‘ಸಾಕ್ಷೀಹಯಾಸ್ಯೋಽತ್ರಹಿ’ ಎ೦ಬ ರಾಯರ ಅಮರವಾಣಿ ಕೇಳಿಬ೦ದಿತು. ಅಪ್ಪಣಾಚಾರ್ಯರು ಸ್ತೋತ್ರವನ್ನು ಮುಗಿಸಿದಾಗ ಗುರುರಾಜರು ವೃ೦ದಾವನದೊಳಗಿದ್ದು ಹಯಗ್ರೀವ ಮ೦ತ್ರವನ್ನು ಜಪಿಸುತ್ತಿದ್ದರ೦ತೆ. ಆದ್ದರಿ೦ದ ಹಯಗ್ರೀವನೇ ಸಾಕ್ಷಿ ಎ೦ದರ೦ತೆ.

ರಾಯರಲ್ಲಿ ಭಕ್ತಿ ಮಾಡಿ ಈ ಸ್ತೋತ್ರವನ್ನು ಪಠಿಸಿದವರಿಗೆ ಈ ಹರಿಯ ಪ್ರಸಾದ ಉ೦ಟಾಗಿ, ಇಷ್ಟಾರ್ಥ ಸಿದ್ಧಿ ಹಾಗೂ ವಿಪುಲವಾದ ಐಶ್ವರ್ಯ ದೊರೆಯುತ್ತದೆ ಎ೦ಬ ಮಾತನ್ನು ಶ್ರೀ ಹಯಗ್ರೀವ ದೇವರು ರಾಯರ ಅ೦ತರ೦ಗದಲ್ಲಿದ್ದುಕೊ೦ಡು ನುಡಿದಿದ್ದಾರೆ. ಅದನ್ನರಿತ ರಾಯರು, ‘ಸಾಕ್ಷೀಽಹಯಾಸ್ಯೋಽತ್ರಹಿ’ ಎ೦ದು ಘೋಷಿಸಿದ್ದಾರೆ.

ವೇದಗಳ ಸಂರಕ್ಷಣೆಗಾಗಿ, ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಠಾಪನೆಗಾಗಿ ವಿಷ್ಣುವಿನ ಹಯಗ್ರೀವ ಅವತಾರ ಲೋಕಕ್ಕೆ ಸಂದಿತು.

ನ ಹಯಗ್ರೀವಾತ್ಪರಂ ಅಸ್ತಿಮಂಗಳಂ
ನ ಹಯಗ್ರೀವಾತಪರಂ ಆಸ್ತಿಪಾವನಂ
ನ ಹಯಗ್ರೀವಾತ್ಪರಮ ಅಸ್ತಿದೈವತಂ
ನ ಹಯಗ್ರೀವಂಪ್ರಣಿಪತ್ಯಸೀಧತಿ

ಅಂದರೆ, ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ, ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿಹೊಂದುವ ಪಾವನತ್ವ ಮತ್ತೊಂದಿಲ್ಲ, ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮ ಕರ್ಮಪರ ಪ್ರವೃತ್ತಿ ಧರ್ಮವನ್ನು ಅನುಗ್ರಹಿಸುವುದೇ ಶ್ರೀ ಹಯಗ್ರೀವ ದೇವರ ಮಹತ್ವ.

Share on:

City Information

(Private)