ಗಂಗೆಯೇ ಮೊದಲಾದ ದ್ವಾದಶ ನದಿಗಳಲ್ಲಿ ಸಾರ್ಧತ್ರಿಕೋಟಿ ತೀರ್ಥ ಸಹಿತ ಪುಷ್ಕರನು ನಿವಾಸ ಮಾಡುವ ಕಾಲಕ್ಕೆ ‘ಪುಷ್ಕರ’ ಎಂದು ಹೆಸರು.
ಮೇಷ ಮೊದಲಾದ ದ್ವಾದಶ ರಾಶಿಗಳಲ್ಲಿ ಬೃಹಸ್ಪತಿ (ಗುರು) ಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು. ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು. ಆಗ ಆಯಾ ನದಿಗಳಲ್ಲಿ ಮೂರುವರೆ ಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲ ಮುನಿಗಳು ವಾಸಿಸುವರು. ಆದ ಕಾರಣ ಪ್ರವೇಶದಿನದಿಂದ ಹನ್ನೆರಡು ದಿನಗಳು-ಆದಿಪುಷ್ಕರ ಎಂದೂ, ಕೊನೆಯ ಹನ್ನೆರಡು ದಿನಗಳು-ಅಂತ್ಯ ಪುಷ್ಕರ ಎಂದೂ ಪ್ರಸಿದ್ಧಿಯಾಗಿವೆ. ಈ ದಿನಗಳಲ್ಲಿ ನದೀ ತೀರಗಳಲ್ಲಿ ಮಾಡುವ ಕ್ಷೇತ್ರಾವಾಸ-ತೀರ್ಥಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಪೂಜಾದಿಗಳೆಲ್ಲವೂ ಅನಂತ ಫಲಪ್ರದವಾಗಿವೆ. ಅರವತ್ತು ಸಾವಿರ ವರ್ಷ ಗಂಗೆಯಲ್ಲಿ ಮಿಂದ ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು.
ಯಾವಾಗ ಯಾವ ನದಿಗೆ ಪುಷ್ಕರ?
1) ಮೇಷ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗಂಗಾನದಿಗೆ ಪುಷ್ಕರ
2) ವೃಷಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ನರ್ಮದಾನದಿಗೆಪುಷ್ಕರ
3) ಮಿಥುನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ
4) ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ
5) ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿಗೆ ಪುಷ್ಕರ
6) ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ
7) ತುಲಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ
8) ವೃಶ್ಚಿಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಭೀಮರಥಿ ನದಿಗೆ ಪುಷ್ಕರ
9) ಧನು ರಾಶಿಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರ ನದಿಗೆ ಪುಷ್ಕರ
10) ಮಕರ ರಾಶಿಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ
11) ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸಿಂಧೂ ನದಿಗೆ ಪುಷ್ಕರ
12) ಮೀನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾನದಿಗೆ ಪುಷ್ಕರ.
ಮೇಷೇಗಂಗಾವೃಷೇರೇವಾಗತೇಯುಗ್ಮೇಸರಸ್ವತಿ
ಯಮುನಾಕರ್ಕಟೇಚೈವಗೋದಾವರ್ಯಪಿಸಿಂಹಗೇ ||
ಕನ್ಯಾಯಾಂಕೃಷ್ಣವೇಣೀಚಕಾವೇರಿಚತುಲಾಗತೇ
ವೃಶ್ಚಿಕೇಸ್ಯಾದ್ಭೀಮರಥೀಸಿಂಧುಃಪ್ರಣಿತಾತಟಿನೀಝುಷೇ
ಮೇಷೇಗುರೌಪ್ರವಿಷ್ಟೇ ಗಂಗಾಪುಷ್ಕರಯುತಾಭವತೀತಿವತ್ ಸರ್ವತ್ರಾನ್ವಯಃ ||
ಜನ್ಮಪ್ರಭೃತಿಯತ್ಪಾಪಂಸ್ತ್ರೀಯಾವಾಪುರುಷೇಣವೆ
ಪುಷ್ಕರೇಸ್ನಾತಮಾತ್ರಸ್ಯಸರ್ವಮೇವಪ್ರಣಶ್ಯತಿ ||
ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಭ್ಯ ಮಾಡಿದ ಪಾಪಗಳು ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲ ಪ್ರಾಪ್ತವಾಗುತ್ತದೆ.