Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಜ್ಯೋತಿಷ್ಯ-

ಪಿತೃಪಕ್ಷ ಆಚರಣೆ, ಪಿಂಡ ಪ್ರದಾನ ಏಕೆ ಮಾಡಬೇಕು?


07 Sep 2020

ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು ಪ್ರತಿಯೊಬ್ಬ ಮಗನ ಕರ್ತವ್ಯ. ಅವರು ನಿಮಗೆ ಅಧಿಕಾರ, ಅಂತಸ್ತು , ಐಶ್ವರ್ಯ, ಆಸ್ತಿ ಕೊಟ್ಟಿಲ್ಲ ಎಂದು ಯೋಚಿಸಬೇಡಿ. ಜನ್ಮಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು. ನೀವು ಕೊಟ್ಟ ಅನ್ನದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ವಿಶ್ವಾಸೋಫಲದಾಯಕಃ

  1. ಅಗ್ನೌಕರಣೇನದೇವಸ್ಥಾಃ... ಪಿತೃಗಳು ದೇವತೆಗಳಾಗಿ ದೇವಲೋಕದಲ್ಲಿದ್ದರೆ, ಅವರಿಗೆ ಅಗ್ನೌಕರಣಾಕ್ಯ ಅನ್ನದಿಂದ ತೃಪ್ತಿಯಾಗುತ್ತದೆ (ಅಗ್ನಿಯಲ್ಲಿ ಹಾಕುವ ಆಹುತಿಗಳಿಂದ).
  2. ಸ್ವರ್ಗಸ್ಥಾಃ ವಿಪ್ರ ಭೋಜನೇ. ಪಿತೃಗಳು ಸ್ವರ್ಗದಲ್ಲಿದ್ದರೆ ಬ್ರಾಹ್ಮಣರ ಭೋಜನ ರೂಪದ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
  3. ಯಮಸ್ಥಾ ಪಿಂಡದಾನೇನ... ಪಿತೃಗಳು ಯಮಲೋಕದಲ್ಲಿದ್ದರೆ ಪಿಂಡಪ್ರದಾನ ರೂಪವಾದ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
  4. ನರಕೇವಿಕಿರೇಣತು...‌ ಪಿತೃಗಳು ನರಕಲೋಕದಲ್ಲಿದ್ದರೆ, ವಿಕಿರಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
  5. ಉಚ್ಛಿಷ್ಟೇನಪಿಶಾಚಾಶ್ಚ... ಪಿತೃಗಳು ಪಿಶಾಚಿಗಳಾಗಿದ್ದರೆ, ಉಚ್ಛಿಷ್ಟ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
  6. ಅಸುರಾಭೂರಿಭೋಜನಾತ್... ಪಿತೃಗಳು ಅಸುರರಾಗಿದ್ದರೆ, ಭೂರಿ ಭೋಜನದಿಂದ ಅವರಿಗೆ ತೃಪ್ತಿಯಾಗುತ್ತದೆ.
  7. ದಕ್ಷಿಣೇನ ಮನುಷ್ಯಾದ್ಯಾಃ ... ಪಿತೃಗಳು ಮನುಷ್ಯರಾಗಿ ಜನಿಸಿದ್ದ ಕಾಲಕ್ಕೂ ಅಥವಾ ಯಾವುದೇ ಯೋನಿಯಲ್ಲಿ ಜನಿಸಿದ್ದರೂ ದಕ್ಷಿಣಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.

ಪಿತೃಗಳ ಸಂತೋಷಕ್ಕಾಗಿ ಪಿತೃಪಕ್ಷದಲ್ಲಿ ಪಿಂಡಪ್ರದಾನ ಮಾಡಿ, ಬ್ರಾಹ್ಮಣರಿಗೆ ಭೋಜನ ದಕ್ಷಿಣೆ ದಾನ, ಅನ್ನದಾನ ಇತರ ಶಕ್ತ್ಯನುಸಾರ ಕೊಡಬೇಕು.

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯತನಕ 15 ದಿನಗಳ ಕಾಲವನ್ನು ಪಿತೃಪಕ್ಷ, ಪಕ್ಷಮಾಸ ಎನ್ನುತ್ತಾರೆ.  ಈ ಅವಧಿಯಲ್ಲಿ ಶ್ರಾದ್ಧಾದಿಕಾರಿಗಳು ಶ್ರಾದ್ಧವನ್ನು ಮಾಡಿದರೆ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತನ್ನಿತ್ತು ಆಶೀರ್ವಾದ ಮಾಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಆದರೂ ಅಂಗವೈಕಲ್ಯದಂತಹ ನ್ಯೂನತೆ ಇರುತ್ತದೆ.

ಮಹಾಭಾರತ ಯುದ್ಧದಲ್ಲಿ ಕರ್ಣ ಹತನಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ತಿನ್ನುವಂಥ ಆಹಾರ ಸಿಗಲಿಲ್ಲವೆಂದು ಬೇಸತ್ತ ಕರ್ಣ ದೇವೇಂದ್ರನಲ್ಲಿ ಕೇಳುತ್ತಾನೆ.  ನೀನು ನಿನ್ನ ಪೂರ್ವಿಕರ ಶ್ರಾದ್ಧದಲ್ಲಿ ಅನ್ನದಾನ ಮಾಡಿಲ್ಲ, ಚಿನ್ನಾಭರಣಗಳನ್ನೇ ಕೊಟ್ಟೆ. ಅದಕ್ಕಾಗಿ ನಿನಗೆ ಆಹಾರ ದೊರಕುತ್ತಿಲ್ಲ ಎಂದು ದೇವೇಂದ್ರ ಉತ್ತರಿಸಿದ.

ತನ್ನ ಪೂರ್ವಜರ ಬಗ್ಗೆ ತಿಳಿದಿಲ್ಲದ ಕಾರಣ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳಿದ. ಹೀಗಾಗಿ, 15 ದಿನಗಳ ಕಾಲ ಭೂಲೋಕಕ್ಕೆ ಮರಳಿ, ಶ್ರಾದ್ಧ ಮಾಡಿ, ಆಹಾರ ದಾನ ನೀಡಲು ಇಂದ್ರ ಸಮ್ಮತಿಸುತ್ತಾನೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.

ಸಮುದ್ರಮಥನದಲ್ಲಿ ದೈತ್ಯರು ಸಾಕಷ್ಟು ಋಷಿಗಳು, ದೇವತೆಗಳನ್ನು ಸಂಹರಿಸಿದರು. ಈ ಋಷಿಗಳು ನಮ್ಮ ಪೂರ್ವಜರಾದ ಕಾರಣ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ.  ಅದುವೇ ಸರ್ವಪಿತೃ ಅಮಾವಾಸ್ಯೆ ಮತ್ತು ಮಹಾಲಯ ಶ್ರಾದ್ಧ.

ಪಿತೃಗಳಿಗೆ ತಿಲ ತರ್ಪಣವೇಕೆ ?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ).  ಅವು ಚಂದ್ರನ ವೃದ್ಧಿಗೂ ಕಾರಣವಾಗಿವೆ.  ಅವನೇ ಪಿತೃಗಳಿಗೆ ಆಧಾರ.  ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ.  ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ.  ಯಜ್ಞವರಾಹ ಸ್ವಾಮಿಯ ಬೆವರಿಂದ ಎಳ್ಳು, ರೋಮದಿಂದ ದಬೆ೯ ಹುಟ್ಟಿದವು.  ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ.  ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ 15 ದಿನ ಹಗಲು, 15 ದಿನ ರಾತ್ರಿಯಾದರೆ 1 ದಿನವಾಗುವುದು.
ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣ ಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣ ಪಕ್ಷದ ಅಷ್ಟಮಿಯಿಂದ ಶುಕ್ಲಪಕ್ಷದ ಅಷ್ಟಮಿಯ ವರೆಗೆ ಹಗಲು.  ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡುಮಧ್ಯಾಹ್ನ ಎನಿಸುತ್ತದೆ.  ಹೀಗಾಗಿ, ಅಮಾವಾಸ್ಯೆಯಂದು ಪಿತೃಗಳಿಗೆ ತಿಲತರ್ಪಣ ಕೊಡುತ್ತಾರೆ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ದರ್ಬೆ ಪವಿತ್ರ ಎನ್ನುವರೇಕೆ?
ದರ್ಬೆ, ಕುಶ, ಕಾಶ, ಬರ್ಹಿ- ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.  ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಸರ್ಪಗಳು ಪುನಃ ಬರುವವರೆಗೂ ಅಮೃತವನ್ನು ದರ್ಬೆಗಳ ಮೇಲೆ ಇಟ್ಟಿರುತ್ತಾನೆ.  ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತೊಯ್ಯುವಾಗ ಅಮೃತದ ಬಿಂದು ದರ್ಬೆಯ ಮೇಲೆ ಬೀಳುತ್ತದೆ.  ಹೀಗೆ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.

 ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ (ಕೆಲವೆಡೆ ಮೂರು).

  1. ಆರಂಭದಲ್ಲಿ ಒಂದು ಪವಿತ್ರಧಾರಣೆ, ಪಾದಪ್ರಕ್ಷಾಲನ, ಅನಂತರ ವಿಸರ್ಜನೆ.
  2. ಬಳಿಕ ಮತ್ತೊಂದು ಪವಿತ್ರಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.
  3. ಆಮೇಲೆ ಇನ್ನೊಂದು ಪವಿತ್ರಧಾರಣೆ, ಉಚ್ಚಿಷ್ಟ ಪಿಂಡಪ್ರದಾನ, ವಿಸರ್ಜನೆ (ಕಾಕಬಲಿ)
  4. ಅನಂತರ ಮತ್ತೊಂದು ಪವಿತ್ರಧಾರಣೆ, ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.
  5. ಕೃಷ್ಣಾರ್ಪಣ, ಇನ್ನೊಂದು ಪವಿತ್ರಧಾರಣೆ. ಅದು ಪರಿಹನಿ ತರ್ಪಣ ಅಥವಾ ಬ್ರಾಹ್ಮಣ ಭೋಜನಕ್ಕೆ ಕುಳಿತ ಅನಂತರ ವಿಸರ್ಜಿಸಬೇಕು.

ಪಿತಾದದಾತಿ ಸತ್ಪುತ್ರಾನ್ಗೋಧನಾನಿ ಪಿತಾಮಹಃ |
ಧನದಾತಾಭವೇತ್ಸೋಪಿಯಸ್ತಸ್ಯ ಪ್ರಪಿತಾಮಹಃ ||
ದದ್ಯಾದ್ವಿಫುಲಮನ್ನಾದ್ಯಂವೃದ್ಧಸ್ತು ಪ್ರಪಿತಾಮಹಃ |
ತೃಪ್ತಾಃ ಶ್ರಾದ್ಧೇನತೇಸರ್ವೇದತ್ವಾಪುತ್ರಸ್ಯ ವಾಂಛಿತಂ ||

Share on:

City Information

(Private)