ಯಾವ ದಿಕ್ಕು ಯಾರಿಗೆ ಸೇರುತ್ತದೆ ಇಲ್ಲಿದೆ ಮಾಹಿತಿ :
ನಿವೇಶನದ ಮುಂಭಾಗ ಉತ್ತರ ದಿಕ್ಕು ಋಷಿಮುನಿಗಳಿಗೆ, ಪೂರ್ವ ದಿಕ್ಕು ರಾಜರುಗಳಿಗೆ, ದಕ್ಷಿಣ ದಿಕ್ಕು ವೈಶ್ಯರುಗಳಿಗೆ ಮತ್ತು ಪಶ್ಚಿಮ ದಿಕ್ಕು ಉಳಿದವರಿಗೆ ಶ್ರೇಯಸ್ಕರ.
ಸೂರ್ಯನ ದಿಕ್ಕಾದ ಪೂರ್ವ, ಚಂದ್ರನ ದಿಕ್ಕಾದ ಉತ್ತರ ತಗ್ಗಿನಲ್ಲಿದ್ದು, ದಕ್ಷಿಣ-ಪಶ್ಚಿಮ ದಿಕ್ಕುಗಳು ಏರು ಪ್ರದೇಶದಲ್ಲಿರಬೇಕು ಇದು ಉತ್ತಮ ನಿವೇಶನ ಲಕ್ಷಣಗಳು.
ನಿವೇಶನವು ಚೌಕ ಅಥವಾ ಚತುಷ್ಕೋನ ಆಕಾರದ ಹೊರತಾಗಿ ಬೇರೆ ಆಕಾರದಲ್ಲಿದ್ದರೆ ದುಃಖವನ್ನು ತರುತ್ತದೆ.
ಪೂರ್ವ-ಪಶ್ಚಿಮದ ಅಗಲ, ಉತ್ತರ-ದಕ್ಷಿಣದ ಅಗಲಕ್ಕಿಂತ ಕಡಿಮೆ ಇರಬಾರದು.
ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ರಸ್ತೆ ಇರುವುದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ.