ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು ಬಿಸಿ ನೀರು ಉತ್ತಮವಾದ ಪರಿಹಾರ.
ಪ್ರತಿದಿನ ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆ ಆಗುತ್ತದೆ.
ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶ ದೇಹದಿಂದ ಹೊರಗೆ ಹೋಗುತ್ತದೆ.
ನೆಗಡಿಯಾಗಿ ಗಂಟಲಲ್ಲಿ ಕಫವು ಸೇರಿದ್ದರೆ ಬೆಳಗಿನ ಸಮಯದಲ್ಲಿ ಬಿಸಿ ನೀರನ್ನ ಸೇವನೆ ಮಾಡಿದರೆ ಕಫವು ಕಡಿಮೆಯಾಗಿ ನೆಗಡಿ ಕಡಿಮೆ ಆಗುತ್ತದೆ.
ಬಿಸಿ ನೀರಿನ ಜೊತೆಗೆ ಜೇನು ತುಪ್ಪ ಮತ್ತು ನಿಂಬೆ ರಸವನ್ನ ಸೇರಿಸಿ ಕುಡಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಬಿಸಿ ನೀರನ್ನ ಸೇವನೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ. ಹಾಗೂ ಶರೀರವು ಶುದ್ಧವಾಗುತ್ತದೆ.
ಬಿಸಿ ನೀರು ನರಮಂಡಲವನ್ನ ಶುದ್ದಿ ಮಾಡುವುದರ ಜೊತೆಗೆ ನಮ್ಮ ಮೆದುಳು ಮತ್ತು ಮನಸ್ಸು ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.
ಮಲಬದ್ಧತೆ ನಿವಾರಣೆ ಆಗುತ್ತದೆ, ಚನ್ನಾಗಿ ಹಸಿವು ಆಗುತ್ತದೆ ಮತ್ತು ವಿಸರ್ಜನಾ ಕ್ರಿಯೆಯು ಸರವಾಗಿ ಆಗುತ್ತದೆ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ.
ಎಣ್ಣೆ ಪದಾರ್ಥಗಳ ಆಹಾರ ಸೇವನೆಯಿಂದ ಕೆಲವರಿಗೆ ಗಂಟಲಲ್ಲಿ ಸಮಸ್ಯೆ ಶುರುವಾಗುತ್ತದೆ ಅವರು ಬಿಸಿ ನೀರನ್ನ ಕುಡಿಯುವುದರಿಂದ ಪರಿವಾರವಾಗುತ್ತದೆ.
ಬಿಸಿ ನೀರನ್ನ ಕುಡಿಯುವುದು ಕಿಡ್ನಿಗೆ ಬಹಳ ಒಳ್ಳೆಯದಾಗುತ್ತದೆ. ಚರ್ಮದ ಸ್ಥಿತಿ ಸ್ಥಾಪಕತ್ವವು ಹೆಚ್ಚಾಗುತ್ತದೆ.
ಪ್ರತಿದಿನ ಬಿಸಿ ನೀರು ಕುಡಿಯರಿ ಅರೋಗ್ಯವಂತರಾಗಿರಿ.