Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಆರೋಗ್ಯ » ಮನೆಮದ್ದು

ನಾಟಿ ಮದ್ದು: ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಮೃತ ಬಳ್ಳಿಯ 10 ಆರೋಗ್ಯಕಾರಿ ಪ್ರಯೋಜನಗಳು ?


13 Aug 2020

ಆಯುರ್ವೇದ ಗಿಡಮೂಲಿಕೆಗಳಲ್ಲಿ ವಿಶೇಷವಾದ ಔಷಧೀಯ ಗುಣಗಳಿರುತ್ತವೆ.

ಇವುಗಳ ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಅಂತಹ ಒಂದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಗಿಡಮೂಲಿಕೆಗಳಲ್ಲಿ ಅಮೃತ ಬಳ್ಳಿಯೂ ಒಂದು.

ಇದನ್ನು ನಾವು ವಿವಿಧ ರೂಪದಲ್ಲಿ ಪಡೆದುಕೊಳ್ಳಬಹುದು. ವಿಶಿಷ್ಟವಾದ ಪೊದೆಯ ರೂಪದಲ್ಲಿ ಹಾಗೂ ಮರಕ್ಕೆ ಹಬ್ಬುವುದರ ಮೂಲಕ ಬೆಳೆಯುತ್ತದೆ.

ಇದು ಬೂದಿ ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ. ಹಾಲು ಮಿಶ್ರಿತ ಹಳದಿ ಬಣ್ಣದ ಹೂವನ್ನು ಬಿಡುವುದು. ಇದರ ಕಾಯಿ ಹಣ್ಣಾದಾಗ ಗಾಢವಾದ ಕೆಂಪು ಬಣ್ಣವನ್ನು ಹೋಲುವುದು. ಇದರ ಕಾಂಡ, ಎಲೆ ಹಾಗೂ ಬೇರುಗಳಿಂದ ಔಷಧಿಯನ್ನು ತಯಾರಿಸಲಾಗುವುದು.

ಅಮೃತ ಬಳ್ಳಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ. ನಂತರ ನೀರನ್ನು ಸೋಸಿ ಕುಡಿಯುವುದರಿಂದ ಶರೀರದಲ್ಲಿ ಬಲವನ್ನು ಪಡೆದುಕೊಳ್ಳಬಹುದು. ಚೈತನ್ಯ ದೊರೆಯುವುದು.

ಹೃದಯಕ್ಕೆ ಹಿತಕರವಾದದ್ದು. ತ್ರಿದೋಷಗಳನ್ನು ಶಮನ ಮಾಡುವಂತಹದ್ದು. ಪಿತ್ತಕೋಶ, ಯಕೃತ್, ದೃಷ್ಟಿದೋಷ, ಮಧುಮೇಹ, ರಕ್ತ ಸಮಸ್ಯೆ ಹಾಗೂ ಶುದ್ಧೀಕರಣಕ್ಕೆ ಸಹಾಯ ಮಾಡುವುದು.

1.ಯಕೃತ್ ಸಮಸ್ಯೆ : 
ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.

ಸಲಕರಣೆ:
ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಸ್ವಲ್ಪ ಹಿಪ್ಪಲಿ.

ವಿಧಾನ:

  • ಈ ಮೂರು ಸಲಕರಣೆಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ.
  • ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.
  • ಮುಂಜಾನೆ ಸಾಮಾಗ್ರಿಗಳನ್ನು ನೀರಿನಿಂದ ಕಿವುಚಿ ತೆಗೆಯಿರಿ/ ಸೋಸಿ.
  • ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.
  • ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸ ಬೇಕು.
  • 10 ರಿಂದ 15 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿದೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳು ನಿವಾರಣೆಯಾಗುವವು.


2.ದೃಷ್ಟಿ ದೋಷ : 
ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು.

ಸಲಕರಣೆಗಳು:
ಅಮೃತ ಬಳ್ಳಿ ಮತ್ತು ಜೇನು ತುಪ್ಪ.

ವಿಧಾನ:

  • ಅಮೃತ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಸೇರಿಸಿ.
  • ನೀರಿನ ಪಾತ್ರೆಗೆ ಅಮೃತ ಬಳ್ಳಿಯ ತುಂಡನ್ನು ಸೇರಿಸಿ, ಚೆನ್ನಾಗಿ ಕುದಿಸಿ.
  • ನಂತರ ದ್ರಾವಣವನ್ನು ಸೋಸಿ, ಸ್ವಲ್ಪ ತ್ರಿಫಲ ಚೂರ್ಣ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.
  • ಇದನ್ನು 45 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ದೃಷ್ಟಿ ದೋಷಗಳನ್ನು ನಿವಾರಿಸಬಹುದು.
  • ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.


3. ವಾಕರಿಕೆ/ವಾಂತಿ : 
ವಾಂತಿಯನ್ನು ಬಲು ಸುಲಭವಾಗಿ ನಿಯಂತ್ರಿಸುವುದು ಅಮೃತ ಬಳ್ಳಿ.

ಸಲಕರಣೆ:
ಅಮೃತ ಬಳ್ಳಿ.

ವಿಧಾನ:

  • ಸ್ವಲ್ಪ ಅಮೃತ ಬಳ್ಳಿ ತುಂಡುಗಳನ್ನು ತೆಗೆದುಕೊಂಡು, ಚೆನ್ನಾಗಿ ಜಜ್ಜಿ.
  • ಬಳಿಕ ನೀರಲ್ಲಿ ಹಾಕಿ, ಸ್ವಲ್ಪ ಸಮಯ ನೆನೆಯಿಡಿ.
  • ಅಮೃತ ಬಳ್ಳಿಯನ್ನು ಕಿವುಚಿ ತೆಗೆದು, ನೀರನ್ನು ಸೋಸಿ.
  • ಬಳಿಕ ಆ ದ್ರಾವಣವನ್ನು ಸೇವಿಸಿ.

 4. ಕೂದಲು ಸೊಂಪಾಗಿ ಬೆಳೆಯುವುದು:
ಅಮೃತ ಬಳ್ಳಿ ಈ ಮೊದಲೆ ಹೇಳಿದಂತೆ ದಿವ್ಯ ಔಷಧಿಯ ಗುಣವನ್ನು ಒಳಗೊಂಡಿದೆ. ಮನೆಯಲ್ಲಿ ಜಾಗವಿದ್ದರೆ ಅಲ್ಲಿ ಅಮೃತ ಬಳ್ಳಿಯನ್ನು ಬೆಳೆಸಿ. ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಇದನ್ನು ಬಳ್ಳಿಯಂತೆ ಹಬ್ಬಿಸಬಹುದು ಅಥವಾ ಚಪ್ಪರದಂತೆ ಮಾಡಿಕೊಳ್ಳಬಹುದು. ಇದರ ಗಾಳಿ ಸೇವನೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಸಾಮಾಗ್ರಿ:
ಅಮೃತ ಬಳ್ಳಿ, ಎಳ್ಳೆಣ್ಣೆ, ಪಚ್ಚಕರ್ಪೂರ.

ವಿಧಾನ:

  • ಅಮೃತ ಬಳ್ಳಿಯನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿ.
  • ಕಷಾಯವು ಸಾಕಷ್ಟು ಇಂಗಿದ ಮೇಲೆ, ಸಮಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ.
  • ಪುನಃ ಕುದಿಯಲು ಇಡಿ. ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಪಚ್ಚ ಕರ್ಪೂರವನ್ನು ಸೇರಿಸಿ.
  • ನೀರಿನಂಶ ಹೋಗುವವರೆಗೆ ಕುದಿಸಬೇಕು.
  • ಸ್ವಲ್ಪ ಸಮಯ ಆರಲು ಬಿಟ್ಟು, ಸೋಸಿಕೊಳ್ಳಿ.
  • ಸೋಸಿದ ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು. ಕಣ್ಣಿಗೆ ತಂಪನ್ನು ನೀಡುವುದು ಹಾಗೂ ಮಿದುಳಿಗೆ ಉತ್ತಮ ಆರೈಕೆ ನೀಡುವುದು.

5. ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್
ಸೂಕ್ತ ಆಹಾರ ಸೇವನೆ ಇಲ್ಲದೆ ಅಥವಾ ಅನುಚಿತ ಆಹಾರ ಪದ್ಧತಿಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಸಹಜ. ಅತಿಯಾದ ಹುಳಿ ತೇಗು, ಗಂಟಲು ಉರಿ, ಎದೆ ಉರಿ ಅನುಭವಿಸುವವರಿಗೆ ಈ ಸಮಸ್ಯೆಗೆ ಅಮೃತ ಬಳ್ಳಿ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

ಸಲಕರಣೆ:
ಒಂದು ತುಂಡು ಅಮೃತ ಬಳ್ಳಿ ಮತ್ತು ತ್ರಿಫಲ ಚೂರ್ಣ

ವಿಧಾನ:

  • ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.
  • ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.
  • ಕುದಿಸಿಕೊಂಡ ಕಷಾಯವನ್ನು ಸೋಸಿ ತೆಗೆದಿಟ್ಟುಕೊಳ್ಳಿ.
  • ಗಣನೀಯವಾಗಿ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಹಿಳಿತೇಗು ಅಥವಾ ಗ್ಯಾಸ್ಟ್ರಿಕ್ ಅಂತಹ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

6. ಅಧಿಕ ತೂಕ ಹೊಂದಿದವರಿಗೆ:
ತೂಕ ಇಳಿಸಲು ಸಾಕಷ್ಟು ಮಂದಿ ವಿವಿಧ ರೀತಿಯ ಔಷಧ ಹಾಗೂ ದೇಹ ದಂಡನೆಯನ್ನು ಮಾಡುತ್ತಾರೆ. ಇಂತಹವರು ಅಮೃತ ಬಳ್ಳಿಯನ್ನು ಬಳಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಬೊಜ್ಜನ್ನು ಕರಗಿಸುವ ದಿವ್ಯ ಗುಣವಿದೆ.

ಸಲಕರಣೆ:
ಒಂದು ತುಂಡು ಅಮೃತ ಬಳ್ಳಿ, ತ್ರಿಫಲ ಚೂರ್ಣ, ಲೋಹ ಬಸ್ಮ ಮತ್ತು ಜೇನುತುಪ್ಪ.

ವಿಧಾನ:

  • ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.
  • ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.
  • ಕುದಿಸಿ ಸೋಸಿಕೊಂಡ ಕಷಾಯಕ್ಕೆ ಲೋಹ ಬಸ್ಮ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.
  • 45 ದಿನಗಳ ಕಾಲ ಗಣನೀಯವಾಗಿ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುವುದು.

7.ಹೃದಯ ಆರೋಗ್ಯಕ್ಕೆ
ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.

ಸಲಕರಣೆಗಳು:
ಅಮೃತ ಬಳ್ಳಿ

ವಿಧಾನ:

  • ಅಮೃತ ಬಳ್ಳಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ.
  • ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.
  • ಮುಂಜಾನೆ ಚೆನ್ನಾಗಿ ಕಿವುಚಿ ತೆಗೆಯಿರಿ/ ಸೋಸಿ.
  • ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.
  • ನಿತ್ಯವು ಇದನ್ನು ಗಣನೀಯವಾಗಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದು.

8.ಮಧುಮೇಹ ಸಮಸ್ಯೆ:
ಮಧುಮೇಹ ಇತ್ತೀಚೆಗೆ ಸಾಮಾನ್ಯವಾದ ಕಾಯಿಲೆಯಾಗಿದೆ. ಕೆಲವರು ನಿತ್ಯ ಒಂದು ಅಮೃತ ಬಳ್ಳಿಯ ಎಲೆಯನ್ನು ಸೇವಿಸುವುದರ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಅಮೃತ ಸತ್ಯವವನ್ನು ಬಳಸುವುದರ ಮೂಲಕವು ನಿಯಂತ್ರಿಸಬಹುದು.

ಸಲಕರಣೆ:
ಅಮೃತ ಬಳ್ಳಿಯ ಸತ್ವ, ನೇರಳೆ ಬೀಜದ ಪುಡಿ, ಬಿಲ್ವ ಪತ್ರೆಯ ರಸ.

ವಿಧಾನ:

  • ಬಿಲ್ವ ಪತ್ರೆಯನ್ನು ರುಬ್ಬಿ ರಸವನ್ನಾಗಿ ಮಾಡಿಕೊಳ್ಳಿ.
  • ಬಿಲ್ವಪತ್ರೆಯ ರಸಕ್ಕೆ ಅಮೃತ ಬಳ್ಳಿಯ ಸತ್ವ ಮತ್ತು ನೇರಳೆ ಬೀಜದ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಮಿಶ್ರಗೊಳಿಸಿ.
  • ನಿತ್ಯವೂ ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡುವುದು.

9. ಕಿವಿ ನೋವು
ಕೆಲವರಿಗೆ ಆಗಾಗ ಕಿವಿ ನೋವು ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಬಹುಬೇಗ ಉಪಶಮನ ನೀಡುವುದು ಅಮೃತ ಬಳ್ಳಿ.

ಸಲಕರಣೆ:
ಅಮೃತ ಬಳ್ಳಿ.

ವಿಧಾನ:

  • ಅಮೃತ ಬಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ.
  • ಸೋಸಿಕೊಂಡ ರಸದ ಒಂದೊಂದು ಹನಿಯನ್ನು ಎರಡು ಕಿವಿಗೆ ಬಿಡಿ.

ಇದರಿಂದ ಕಿವಿ ನೋವು ಬಹುಬೇಗ ನಿವಾರಣೆಯಾಗುವುದು.

10.ಕುರ/ಕೀವು ತುಂಬಿದ ಗಾಯ:
ಅಲರ್ಜಿ ಹಾಗೂ ರಕ್ತ ಸಮಸ್ಯೆಯಿಂದ ಕುರ ಹಾಗೂ ಕೀವು ತುಂಬಿದಂತಹ ಗಾಯಗಳಿಗೆ ಅಮೃತ ಬಳ್ಳಿ ಉತ್ತಮ ಆರೈಕೆ ಮಾಡುವುದು.

ಸಲಕರಣೆಗಳು:
ಅಮೃತ ಬಳ್ಳಿ ಮತ್ತು ಸೊಗದೆ ಬೇರು.

ವಿಧಾನ:

  • ಅಮೃತ ಬಳ್ಳಿ ಮತ್ತು ಸೊಗದೆ ಬೇರನ್ನು ತೆಗೆದುಕೊಂಡು ಜಜ್ಜಿಕೊಳ್ಳಿ.
  • ನಂತರ ನೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ.
  • ಸೋಸಿಕೊಂಡ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಸೇವಿಸಿ.
  • ಗಣನೀಯವಾಗಿ ಈ ಕಷಾಯವನ್ನು ಸೇವಿಸುವುದರಿಂದ ಗಾಯ ಗುಣವಾಗುವುದು. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು.

ಮಾಹಿತಿ: ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373

Share on:

City Information

(Private)