Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಕೃಷ್ಣ ಜನ್ಮಾಷ್ಟಮಿಯಂದು ಭಗವಾನ್‌ ಕೃಷ್ಣನನ್ನು ಹೇಗೆ ಪೂಜಿಸಬೇಕು ಗೊತ್ತಾ..? ಅಪ್ಪಿ ತಪ್ಪಿಯೂ ಕೃಷ್ಣ ಜನ್ಮಾಷ್ಟಮಿಯ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ.


11 Aug 2020

ಶ್ರೀ ಕೃಷ್ಣ ಜನ್ಮಾಷ್ಟಮಿ :

ಭಗವಾನ್‌ ವಿಷ್ಣು ಕೃಷ್ಣನಾಗಿ ಭೂಮಿಯಲ್ಲಿ ಜನಿಸಿದ ದಿನವನ್ನೇ ನಾವು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಇಂಗ್ಲಿಷ್‌ ಕ್ಯಾಲೆಂಡರ್‌ ಪ್ರಕಾರ ಈ ಹಬ್ಬವು ಸಾಮಾನ್ಯವಾಗಿ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ 2020 ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್‌ 11 ಮತ್ತು 12 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಜಗತ್ತಿನಾದ್ಯಂತ ಜನರು ಕೃಷ್ಣನನ್ನು ಪೂಜಿಸುತ್ತಾರೆ, ಕೀರ್ತನೆಯಲ್ಲಿ ಮತ್ತು ಭಜನೆಯಲ್ಲಿ ಸಂಪೂರ್ಣ ರಾತ್ರಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ, ಕನ್ಹಯ್ಯ ಅಷ್ಟಮಿ, ಕನ್ಹಯ್ಯ ಆಥೆ, ಶ್ರೀ ಕೃಷ್ಣ ಜಯಂತಿ, ಶ್ರೀ ಶ್ರೀ ಜಯಂತಿ ಸೇರಿದಂತೆ ಇನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಭಗವಾನ್‌ ಕೃಷ್ಣನು ಕ್ರಿ.ಪೂ 3228 ರ ಜುಲೈ 18 ರಂದು ಜನಿಸಿದನು.

ಕೃಷ್ಣ ಜನ್ಮಾಷ್ಟಮಿ ಮಹತ್ವ:

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀಕೃಷ್ಣ ವ್ರತವನ್ನು 'ವ್ರತರಾಜ' ಎಂದೂ ಕರೆಯಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಉಳಿದೆಲ್ಲಾ ಉಪವಾಸ ವ್ರತದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಜನ್ಮಾಷ್ಟಮಿ ದಿನದಂದು ಉಪವಾಸ ವ್ರತ ಮಾಡುವುದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷವನ್ನು, ಸಮೃದ್ಧಿಯನ್ನು, ಸಂತತಿಯ ಬೆಳವಣಿಗೆಯನ್ನು, ದೀರ್ಘಾಯುಷ್ಯವನ್ನು ಮತ್ತು ಪಿತೃದೋಷದಿಂದ ಪರಿಹಾರವನ್ನು ಪಡೆದುಕೊಳ್ಳುವರು. ಕುಂಡಲಿಯಲ್ಲಿನ ಚಂದ್ರನ ದೌರ್ಬಲ್ಯವನ್ನು ಕೂಡ ಕೃಷ್ಣಾಷ್ಟಮಿ ಉಪವಾಸ ವ್ರತವು ದೂರಾಗಿಸುತ್ತದೆ.

ಕೃಷ್ಣ ಜನ್ಮಾಷ್ಟಮಿ ಉಪವಾಸ ಕ್ರಮ ಮತ್ತು ಪೂಜಾ ವಿಧಿ:

ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ವಿವಿಧ ಜನರು ತಮ್ಮ ಭಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಮಾಡುತ್ತಾರೆ. ಕೆಲವರು ಜನ್ಮಾಷ್ಟಮಿಯ ಹಿಂದಿನ ದಿನದಂದು ಉಪವಾಸವನ್ನು ಕೈಗೊಂಡರೆ, ಇನ್ನು ಕೆಲವರು ಜನ್ಮಾಷ್ಟಮಿ ದಿನದಂದು ಉಪವಾಸವನ್ನು ಮಾಡುತ್ತಾರೆ.

ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಾನ :

  1. ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವ ವ್ಯಕ್ತಿಯು ಉಪವಾಸ ಮಾಡುವುದಕ್ಕಿಂತ ಒಂದು ದಿನ ಮೊದಲು ಅಂದರೆ ಸಪ್ತಮಿಯಂದು ಸಾತ್ವಿಕ ಆಹಾರವನ್ನು ಸೇವಿಸಬೇಕು.
  2. ಅಷ್ಟಮಿ ದಿನದಂದು ಸ್ನಾನ ಮಾಡಿ, ಅಂದರೆ ಉಪವಾಸ ಮಾಡುವ ದಿನ ಬೆಳಗ್ಗೆ ಸ್ನಾನ ಮಾಡಿ ಎಲ್ಲಾ ದೇವರು ಮತ್ತು ದೇವತೆಗಳನ್ನು ಪ್ರಾರ್ಥಿಸಿ. ನಂತರ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
  3. ಈಗ ನೀವು ಕೈಯಲ್ಲಿ ನೀರು ಮತ್ತು ಹೂವುಗಳನ್ನು ತೆಗೆದುಕೊಂಡು ಉಪವಾಸ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. ಮತ್ತು ಎಲ್ಲಾ ವಿಧಿ, ಆಚರಣೆಗಳಿಗೆ ಬದ್ಧರಾಗಿ ಬಾಲ ಗೋಪಾಲನನ್ನು ಪೂಜಿಸಿ.
  4. ಉಪವಾಸ ವ್ರತದ ದಿನ ಮಧ್ಯಾಹ್ನದಂದು ಮತ್ತೊಮ್ಮೆ ನೀರಿಗೆ ಕಪ್ಪು ಎಳ್ಳನ್ನು ಬೆರೆಸಿ ಸ್ನಾನ ಮಾಡಿ.
  5. ನಂತರ ದೇವಕಿಯನ್ನು, ವಾಸುದೇವನನ್ನು, ಬಲರಾಮದೇವನನ್ನು, ನಂದನನ್ನು, ಯಶೋದಾಳನ್ನು ಮತ್ತು ಲಕ್ಷ್ಮಿಯನ್ನು ಪೂಜಿಸಿ.
  6. ಮತ್ತೆ ಪುನಃ ನೀವು ರಾತ್ರಿ 12 ಗಂಟೆಯೊಳಗೆ ಸ್ನಾನವನ್ನು ಮಾಡಬೇಕು. ಒಂದು ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಅದರ ಮೇಲೆ ಶ್ರೀ ಕೃಷ್ಣನ ಪ್ರತಿಮೆಯನ್ನು ಅಥವಾ ಫೋಟೋವನ್ನು ಇಡಿ.
  7. ಕೃಷ್ಣನ ವಿಗ್ರಹವನ್ನು ಪಂಚಾಮೃತ ಮತ್ತು ಗಂಗಾಜಲದಿಂದ ಅಭಿಷೇಕ ಮಾಡಿದ ನಂತರ ಅವನಿಗೆ ಹೊಸ ಬಟ್ಟೆಯನ್ನು ಧರಿಸಿ.
  8. ಕೃಷ್ಣನ ಪೂಜೆಯಲ್ಲಿ ಧೂಪ - ದೀಪವನ್ನು ಬೆಳಗಿ, ಅಕ್ಷತೆ, ತಿಲಕ ಮತ್ತು ಕುಂಕುಮವನ್ನು ಹಚ್ಚಿ ಬೆಣ್ಣೆ ಮಿಶ್ರಿತ ಸಿಹಿ ಖಾದ್ಯವನ್ನು ಅರ್ಪಿಸಿ. ಕೃಷ್ಣನನ್ನು ಪೂಜಿಸುವಾಗ ತಪ್ಪದೇ ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಬಳಸಲು ಮರೆಯದಿರಿ. ಬಾಲ ಗೋಪಾಲನನ್ನು ಕ್ರಮಬದ್ಧವಾಗಿ ಪೂಜಿಸಿದ ನಂತರ ಅವನ ಆಶೀರ್ವಾದವನ್ನು ಕಡ್ಡಾಯವಾಗಿ ಪಡೆದುಕೊಳ್ಳಿ.
  9. ಉಪವಾಸ ವ್ರತವನ್ನು ಕೈಗೊಂಡ ಕೃಷ್ಣನ ಭಕ್ತರು ರಾತ್ರಿ 12 ಗಂಟೆಯ ನಂತರವೇ ಉಪವಾಸವನ್ನು ಕೈಬಿಡಬೇಕು. ಉಪವಾಸದ ಸಮಯದಲ್ಲಿ ಧಾನ್ಯಗಳನ್ನು ಸೇವಿಸಬಾರದು. ಹಣ್ಣುಗಳನ್ನು ಸೇವಿಸಬಹುದು.

ದಿನಕ್ಕೆ ಮೂರು ಬಾರಿ ಕೃಷ್ಣನನ್ನು ಪೂಜಿಸಿ:
ಕೃಷ್ಣ ಜನ್ಮಾಷ್ಟಮಿ ಹಬ್ಬವು ಎರಡು ದಿನಗಳವರೆಗೆ ಇರುತ್ತದೆ. ಕೆಲವರು ಕೃಷ್ಣನ ಜನನದ ಮೊದಲು ಉಪವಾಸವನ್ನು ಮಾಡಿದರೆ ಇನ್ನು ಕೆಲವರು ಕೃಷ್ಣನು ಜನಿಸಿದ ದಿನದಂದು ಉಪವಾಸವನ್ನು ಮಾಡುತ್ತಾರೆ.

ಈ ದಿನ ಕೃಷ್ಣನನ್ನು ಮುಖ್ಯವಾಗಿ 3 ಬಾರಿ ಪೂಜಿಸಲಾಗುತ್ತದೆ.

  1. ಮೊದಲ ಪೂಜೆ: ಜನ್ಮಾಷ್ಟಮಿ ದಿನದಂದು ಸೂರ್ಯೋದಯದ ಮುನ್ನ ಒಮ್ಮೆ ಪೂಜೆಯನ್ನು ಮಾಡಲಾಗುತ್ತದೆ. ಸೂರ್ಯೋದಯದ ಮುನ್ನ ಸ್ನಾನ ಮಾಡಿ ನಂತರ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಉಪವಾಸವನ್ನು ಆಚರಿಸುವ ಜನರು ಕೃಷ್ಣನ ಬಾಲಾವಸ್ಥೆಯನ್ನು ಪೂಜಿಸಬೇಕು.
  2. ಎರಡನೇ ಪೂಜೆ: ಕೃಷ್ಣ ಜನ್ಮಾಷ್ಟಮಿಯಂದು ಎರಡನೇ ಪೂಜೆಯನ್ನು ಮಧ್ಯಾಹ್ನ ನಡೆಸಲಾಗುತ್ತದೆ. ಮೊದಲನೆಯದಾಗಿ ಮಧ್ಯಾಹ್ನ ದೇವಕಿಗೆ ಜಲಾಭಿಷೇಕವನ್ನು ಮಾಡಲಾಗುತ್ತದೆ. ನಂತರ ಸುತಿಕಾ ಗ್ರಹವನ್ನು ನಿರ್ಮಿಸಿ ಪೂಜಿಸಬೇಕು. ಮಾತೆ ದೇವಕಿಯನ್ನು ಪೂಜಿಸಿದ ನಂತರ ಎಲ್ಲಾ ವಿಧಿ - ವಿಧಾನಗಳ ಮೂಲಕ ಭಗವಾನ್‌ ಕೃಷ್ಣನನ್ನು ಪೂಜಿಸಬೇಕು.
  3. ಮೂರನೇ ಪೂಜೆ: ಕೃಷ್ಣ ಜನ್ಮಾಷ್ಟಮಿಯಂದು ಆಚರಿಸಲಾಗುವ 3ನೇ ಪೂಜೆ ಅತ್ಯಂತ ಪ್ರಮುಖವಾದ ಪೂಜೆಯಾಗಿದೆ. ಯಾಕೆಂದರೆ 3ನೇ ಪೂಜೆಯನ್ನು ಮಧ್ಯರಾತ್ರಿ 12 ಗಂಟೆಯ ನಂತರ ಮಾಡಲಾಗುತ್ತದೆ. ಅಂದರೆ ಭಗವಾನ್‌ ಕೃಷ್ಣನ ಜನನದ ಸಮಯದಲ್ಲಿ ಮಾಡಲಾಗುತ್ತದೆ. ಈ ಸಮಯದಲ್ಲಿ ಕೃಷ್ಣ ಭಕ್ತರು ಶ್ರಿಕೃಷ್ಣನ ಮಗುವಿನ ರೂಪವನ್ನು ಪೂಜಿಸುತ್ತಾರೆ. ಮೂರನೇ ಪೂಜೆಯಲ್ಲಿ ಕೃಷ್ಣನಿಗೆ ಭೋಗವನ್ನು ಅರ್ಪಿಸಿದ ನಂತರ ಕೃಷ್ಣ ಭಕ್ತರು ಉಪವಾಸವನ್ನು ಕೈಬಿಡುತ್ತಾರೆ.

ಕೃಷ್ಣ ಜನ್ಮಾಷ್ಟಮಿಯಂದು ನೆನೆಪಿನಲ್ಲಿಡಬೇಕಾದ ವಿಶೇಷ ವಿಷಯ:

ಈ ವಿಶೇಷ ದಿನದಂದು ಯಾವುದೇ ರೀತಿಯ ಮರಗಳನ್ನು ಅಥವಾ ಗಿಡಗಳನ್ನು ಕಡಿಯಬಾರದು. ಬಡವರಿಗೆ ಹಾಗೂ ನಿರ್ಗತಿಕರಿಗೆ ಕೈಲಾದ ಸಹಾಯವನ್ನು ಮಾಡಬೇಕು. ಈ ದಿನ ರಾಧಾ - ಕೃಷ್ಣ ದೇವಾಲಯಕ್ಕೆ ಹೋಗಿ ಕೃಷ್ಣನನ್ನು ಭೇಟಿಯಾಗಬಹುದು. ಅಥವಾ ಮನೆಯಲ್ಲೇ ಕೃಷ್ಣನ ಕೀರ್ತನೆ ಮತ್ತು ಭಜನೆಯನ್ನು ಅನುಸರಿಸಬಹುದು. ಭಗವಾನ್‌ ಕೃಷ್ಣನು ಕೊಳಲನ್ನು ಮತ್ತು ನವಿಲು ಗರಿಯನ್ನು ಇಷ್ಟ ಪಡುವುದರಿಂದ ಕೃಷ್ಣ ಜನ್ಮಾಷ್ಟಮಿಯಂದು ತಪ್ಪದೇ ಕೃಷ್ಣನ ವಿಗ್ರಹದ ಮುಂದೆ ಕೊಳಲನ್ನು ಮತ್ತು ನವಿಲು ಗರಿಯನ್ನು ಇಡಿ.

ಈ ವಸ್ತುಗಳನ್ನು ಭಗವಾನ್‌ ಕೃಷ್ಣನಿಗೆ ಅರ್ಪಿಸಲು ಮರೆಯದಿರಿ:
ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನಿಗೆ 56 ವಿವಿಧ ಅರ್ಪಣೆಗಳನ್ನು ಅಥವಾ ಭೋಗಗಳನ್ನು ಅರ್ಪಿಸಲಾಗುತ್ತದೆ. ಆದರೆ ಕೆಲವೊಬ್ಬರಿಗೆ 56 ವಿವಿಧ ಬಗೆಯ ಖಾದ್ಯಗಳನ್ನು ಕೃಷ್ಣನಿಗೆ ಅರ್ಪಿಸಲು ಕಷ್ಟವಾಗಬಹುದು. ಆದರೆ ನೀವು ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಈ ದಿನ ನೀವು ಕೃಷ್ಣನಿಗೆ 56 ವಿವಿಧ ಖಾದ್ಯಗಳನ್ನು ಅರ್ಪಿಸಲು ಸಾಧ್ಯವಾಗದಿದ್ದರೆ ಬೆಣ್ಣೆಯಿಂದ ತಯಾರಿಸಿದ ಒಂದು ಸಿಹಿ ಖಾದ್ಯವನ್ನು ಅಥವಾ ಬೆಣ್ಣೆಯನ್ನು ಅರ್ಪಿಸಬಹುದು. ಕೃಷ್ಣನು ಬೆಣ್ಣೆಯನ್ನು ಇಷ್ಟ ಪಡುವುದರಿಂದ ನಿಮ್ಮ ಕೈಲಾದಷ್ಟು ಬೆಣ್ಣೆಯ ಖಾದ್ಯವನ್ನು ಅಥವಾ ಬೆಣ್ಣೆಯನ್ನು ಅರ್ಪಿಸಿ ಇದರಿಂದ ಕೃಷ್ಣನು ಸಂತಸಗೊಂಡು ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸುವನು.

Share on:

City Information

(Private)