ಸೇಬಿನಲ್ಲಿ ಪೂಟಾಷಿಯಂ ಅಧಿಕವಾಗಿರುವುದರಿಂದ ಸೇಬನ್ನು ತಿನ್ನುವುದು ಒಳ್ಳೆಯದು. ಶ್ವಾಸಕೋಶಗಳು ಚುರುಕಾಗಿರಲು ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು.
ಪ್ರತಿದಿನವೂ ಈರುಳ್ಳಿಯನ್ನು ಹಸಿಯಾಗಿ ಅಥವಾ ಆಹಾರ ಪದಾರ್ಥದಲ್ಲಿ ಬಳಸುವುದರಿಂದ ಹೃದಯದ ತೊಂದರೆಗಳು ದೂರವಾಗುತ್ತವೆ.
ಹೃದಯದಲ್ಲಿರುವ ಕವಾಟಗಳು, ನರಗಳು, ಶ್ವಾಸಕೋಶಗಳು ಚುರುಕಾಗುತ್ತವೆ. ಕಲ್ಲಂಗಡಿ ಬೀಜ, ಗಸಗಸೆ, ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲು ಮತ್ತು ಕಲ್ಲುಸಕ್ಕರೆಯ ಜೊತೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದು.
ಕೊತ್ತಂಬರಿ ಬೀಜವನ್ನು ಅರ್ಧಂ ಬರ್ಧಂ ಅರೆದು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧ ದಪ್ಪಗಾದ ಮೇಲೆ ಕಷಾಯವನ್ನು ಕೆಳಗಿಳಿಸಿ. ನಂತರ ಅದಕ್ಕೆ ಹಾಲು, ಸಕ್ಕರೆಯನ್ನು ಬೆರೆಸಿ ಕುಡಿಯಬೇಕು.
ಸೂಕ್ತವಾದ ವ್ಯಾಯಾಮ, ವಾಕಿಂಗ್ ಹೃದಯದ ದೌರ್ಬಲ್ಯವನ್ನು ದೂರಪಡಿಸುವುದು.
ಪಪ್ಪಾಯಿ ಹಣ್ಣಿನ ಬೀಜ, ಸಿಪ್ಪೆ ಸಮೇತ ಮಿಕ್ಸಿಗೆ ಹಾಕಿಕೊಂಡು ಪೇಸ್ಟ್ನಂತೆ ತಯಾರಿಸಿಕೊಳ್ಳಿ. ಅದಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನಬಹುದು. ಇದನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವುದು ಒಳ್ಳೆಯದು.
ಹಸಿ ತರಕಾರಿಗಳು, ತಾಜಾ ಹಣ್ಣುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.