ಮೂಲತತ್ವ–ಬ್ರಹ್ಮ ಒಂದೇ ಸತ್ಯ. ಜಗತ್ತು. ಬ್ರಹ್ಮವು ಜ್ಞಾನಸ್ವರೂಪವಾಗಿದೆ.. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.
ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು. ಈ ಜ್ಞಾನವನ್ನು ಪಡೆಯಲು ನಾಲ್ಕು ಸಾಧನೆಗಳು ಅವಶ್ಯ.
ಅವು ಯಾವುವೆಂದರೆ :
- ನಿತ್ಯಾನಿತ್ಯ ವಿವೇಕ-ಬ್ರಹ್ಮವೊಂದೇ ಸತ್ಯ, ಉಳಿದವು ಅನಿತ್ಯ ಎಂಬ ವಿವೇಕ.
- ಇಹಾಮುತ್ರ ಫಲಭೋಗ ವಿರಾಗ. ಈ ಲೋಕದ ಮತ್ತು ಪರಲೋಕದ ಭೋಗದ ಬಗಗೆ ವಿರಕ್ತಿ.
- ಶಮ ದಮಾದಿ ಷಟ್ಕ ಸಂಪತ್ತಿ
ಅ) ಶಮ–ಅಂತರಂಗದ ಇಂದ್ರಿಯಗಳ ಹತೋಟಿ
ಆ) ಧರ್ಮ-ಬಹಿರಿಂದ್ರಿಯ ನಿಗ್ರಹ
(ಇ) ಉಪರತಿ–ಕರ್ಮಫಲ ತ್ಯಾಗ
(ಈ) ತಿತಿಕ್ಷ–ಸಹನೆ
(ಉ) ಚಿತ್ತದ ಏಕಾಗ್ರತೆ
(ಊ) ಶ್ರದ್ಧೆ–ಗುರು ಹಾಗೂ ವೇದಾಂತದಲ್ಲಿ ನಿಷ್ಠೆ - ಮುಮುಕ್ಷತ್ತ್ವ– ಮೋಕ್ಷ ಬೇಕೆಂಬ ತೀವ್ರ ಅಪೇಕ್ಷೆ
ಈ ಮೇಲೆ ನಮೂದಿಸಿದ ನಾಲ್ಕು ಸಾಧನೆಗಳ ಜೊತೆಗೆ, ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಮೂರೂ ವಿಧದ ಸಾಧನೆಯೂ ಜ್ಞಾನದ ಪ್ರಾಪ್ತಿಗೆ ಅವಶ್ಯ
ಶ್ರೀ ಶಂಕರರು ಬದುಕಿದ್ದು ಕೇವಲ 32 ವರ್ಷ. ಆದರೆ ಅವರು ತಮ್ಮ ಜೀವಿತದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗುವಂತೆ ಕೆಲಸಮಾಡಿದರು. ಅವರ ಬಗಗೆ ಜನಶ್ರುತಿ ಹೀಗಿದೆ
ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರವಿತ್,
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್॥
ಅರ್ಥ 8ನೇ ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವ ಶಾಸ್ತ್ರಗಳನ್ನೂ ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು, 32ನೇ ವರ್ಷದಲ್ಲಿ ಹೊರಟುಹೋದರು.
ಇಂಥಾ ಮಹಾಮಹಿಮರಾದ, ಅದ್ಭುತ ಕಾರ್ಯಗಳನ್ನು ಎಸಗಿದ, ಯತಿಚಕ್ರವರ್ತಿಯಾದ, ಆಚಾರ್ಯವರ್ಯರಾದ
ಶ್ರೀ ಶಂಕರಾಚಾರ್ಯರಿಗೆ ಅನಂತಾನಂತ ಕೋಟಿಕೋಟಿ ನಮನಗಳು.
॥ಜಯತು ಜಯತು ನಿತ್ಯಂ ಶಂಕರಾಚಾರ್ಯವರ್ಯಾ
ಜಯತು ಜಯತು ತಸ್ಯ ಅದ್ವೈತವಿದ್ಯಾ ಅನವದ್ಯಾ।
॥ಜಯತು ಜಯತು ಲೋಕೇ ತಚ್ಚರಿತ್ರಂ ಪವಿತ್ರಂ
॥ಜಯತು ಜಯತು ಭಕ್ತಿಸ್ತತ್ಪದಾಬ್ಜೇ ಜನಾನಾಂ॥
ಮಾಹಿತಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373