- ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ.
- ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ.
- ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ.
- ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ.
- ಬಾಳೆಹಣ್ಣು ತಿನ್ನುವುದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದು - ಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ.