Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಶ್ರೀ ಅನಂತ ಪದ್ಮನಾಭ ದೇವರ ಅನಂತ ಚತುರ್ದಶಿ ವ್ರತದ ಕಥೆಯನ್ನು ನೋಡೋಣ


28 Jul 2020

ಶ್ರೀ ಅನಂತ ಪದ್ಮನಾಭ ದೇವರ ಅನಂತ ಚತುರ್ದಶಿ ವ್ರತದ ಕಥೆಯನ್ನು ನೋಡೋಣ ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರಧಾನಿಸುತ್ತಾರೆ ಅಂತಾ ಆಧ್ಯಾತಿಕ ಚಿಂತಕರು ಹೇಳುತ್ತಾರೆ.

ಅನಂತ ವ್ರತದ ಬಗ್ಗೆ ಒಂದು ಕಥೆಯನ್ನು ನೋಡೋಣ : 

ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ ‘ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ’ ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು. ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು.

ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು ‘ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ’ ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು ‘ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ’ ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು. ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು.

ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, 14 ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಸಿಗುವಂತೆ ವರವನ್ನು ನೀಡಿದರು.

ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ :

ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಅನೇಕರು ಅನಂತ ವ್ರತವನ್ನು 14 ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ನೀಡುವನು ಅಂತಾ ಹಿರಿಯರು ಹೇಳುತ್ತಾರೆ.

ಮಾಹಿತಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373

Share on:

City Information

(Private)