ಪ್ರತಿದಿನ 20 ಮಿಲಿ ಜೇನುತುಪ್ಪವನ್ನು 2 ಲೀಟರ್ ನೀರಿಗೆ ಬೆರೆಸಿ ಆ ನೀರನ್ನು ಸೇವಿಸಿದರೆ ಬೊಜ್ಜು ಕರಗಿ ಸ್ಲಿಮ್ಬಾಡಿ ನಿಮ್ಮದಾಗುತ್ತದೆ.
ಒಂದು ಚಮಚ ಜೇನುತುಪ್ಪವನ್ನು ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿಯ ಪುಡಿಯೊಂದಿಗೆ ರಾತ್ರಿ ಹೊತ್ತು ಸೇವಿಸಿದರೆ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ.
ಜೇನುತುಪ್ಪವನ್ನು ತುಳಸಿ ರಸದೊಂದಿಗೆ ಸೇವಿಸಿದರೆ ಕೆಮ್ಮು, ನೆಗಡಿ ಶಮನವಾಗುತ್ತದೆ.
ಬಾಳೆಹಣ್ಣಿನೊಂದಿಗೆ ಜೇನನ್ನು ಸೇವಿಸಿದರೆ ಅದು ಬಲವನ್ನು ವೃದ್ಧಿಸುತ್ತದೆ.
ರಾತ್ರಿ ಮಲಗುವಾಗ ಮೊಡವೆಗಳಿಗೆ ಜೇನನ್ನು ಲೇಪಿಸಿ ಬೆಳಗ್ಗೆ ತೊಳೆದರೆ ಮೊಡವೆ ನಿವಾರಣೆಯಾಗುತ್ತದೆ.