ಪ್ರತಿದಿನ 2 ಹಸಿ ತೊಂಡೆಕಾಯಿ ಸೇವಿಸಿದರೆ ಒಣಗಿದ ಚರ್ಮ ಮೃದುವಾಗುತ್ತದೆ.
ಎರಡು ಚಮಚ ತೊಂಡೆ ಗಿಡದ ಕಾಂಡದ ಪುಟಿಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸಿದರೆ ದೇಹದ ಬೊಜ್ಜು ಕರಗುತ್ತದೆ.
ಕಣ್ಣುಗಳು ಉರಿಯುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವವರೆಗೆ ಚೆನ್ನಾಗಿ ಕುದಿಸಿ. ಆ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣಿನ ಉರಿ ನಿವಾರಣೆಯಾಗುತ್ತದೆ.
ದೇಹದಲ್ಲಿ ಗಂದೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಆ ಜಾಗಕ್ಕೆ ಲೇಪ ಮಾಡಿದರೆ ಗಂದೆಗಳು ಶಮನವಾಗುತ್ತವೆ.
ಸಂಧಿಗಳಲ್ಲಿ ಊತ ಇದ್ದರೆ, ತೊಂಡೆ ಗಿಡದ ಎಲೆಗಳನ್ನು ಬೇವಿನ ಎಣ್ಣೆಯಲ್ಲಿ ಬಾಡಿಸಿ ಪೇಸ್ಟ್ ಮಾಡಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಊತ ಕಡಿಮೆಯಾಗುತ್ತದೆ.
ಎರಡು ಚಮಚ ತೊಂಡೆ ಎಲೆಯ ರಸಕ್ಕೆ ಅರ್ಧಕಪ್ ಮೊಸರು ಸೇರಿಸಿ ದಿನ 2 ರಿಂದ 3 ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ.
ತೊಂಡೆಕಾಯಿ ಎಲೆಗಳನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಶಮನವಾಗುತ್ತದೆ.
ತೊಂಡೆಕಾಯಿ ಎಲೆಗಳ ರಸವನ್ನು ಎಳ್ಳೆಣ್ಣೆ ಜೊತೆ ಕುದಿಸಿ ಎಣ್ಣೆ ತಯಾರಿಸಿ ಚರ್ಮದ ಮೇಲೆ ಹಚ್ಚಿದರೆ ಚರ್ಮದ ಕಾಯಿಲೆ ನಿವಾರಣೆಯಾಗುತ್ತದೆ.